ಸೆಕ್ಸ್ ವಿಡಿಯೋ ತೋರಿಸಿ ರೇಪ್: ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ನಿರ್ದೇಶಕನ ವಿರುದ್ಧ ನಟಿ ದೂರು!

ಬಣ್ಣದ ಲೋಕದಲ್ಲಿ ಲವ್, ಸೆಕ್ಸ್, ದೋಖಾ ಸಾಮಾನ್ಯವಾಗಿಬಿಟ್ಟಿದೆ ಅನಿಸುತ್ತಿದೆ. ಹೌದು, ಮದುವೆಯಾಗುವುದಾಗಿ ನಂಬಿಸಿ ನಿರ್ದೇಶಕ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ನಟಿ ದೂರು ದಾಖಲಿಸಿದ್ದಾರೆ. 

Published: 01st December 2020 04:00 PM  |   Last Updated: 01st December 2020 04:44 PM   |  A+A-


ayush tiwari

ಆಯುಷ್ ತಿವಾರಿ

Posted By : Vishwanath S
Source : Online Desk

ಮುಂಬೈ: ಬಣ್ಣದ ಲೋಕದಲ್ಲಿ ಲವ್, ಸೆಕ್ಸ್, ದೋಖಾ ಸಾಮಾನ್ಯವಾಗಿಬಿಟ್ಟಿದೆ ಅನಿಸುತ್ತಿದೆ. ಹೌದು, ಮದುವೆಯಾಗುವುದಾಗಿ ನಂಬಿಸಿ ನಿರ್ದೇಶಕ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ನಟಿ ದೂರು ದಾಖಲಿಸಿದ್ದಾರೆ. 

ಕಿರುತೆರೆ ಮತ್ತು ವೆಬ್ ಸಿರೀಸ್ ನಟಿಯೋರ್ವರು ನಿರ್ದೇಶಕ ಆಯುಷ್ ತಿವಾರಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಇನ್ನು ಮುಂಬೈನ ವಾರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟಿ ತಮ್ಮ ದೂರಿನಲ್ಲಿ ಆಯುಷ್ ತಿವಾರಿ ಕೆಲವು ದಿನಗಳಿಂದ ತನಗೆ ಪೋರ್ನ್ ವಿಡಿಯೋಗಳನ್ನು ತೋರಿಸಿ ಅತ್ಯಾಚಾರ ನಡೆಸಿದ್ದಾರೆ. ಇನ್ನು ಮದುವೆಯಾಗುವುದಾಗಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪರಿಚಯಸ್ಥರಾಗಿದ್ದು ವೆಬ್ ಸಿರೀಸ್ ನಲ್ಲಿ ನಟಿಸುವ ಅವಕಾಶ ನೀಡಿದ್ದರು ಎಂದು ತಿಳಿದುಬಂದಿದೆ. ಇನ್ನು ನಟಿ ಹಲವು ದಿನಗಳಿಂದ ಆಯುಷ್ ನಿಂದ ದೂರವಾಗಿದ್ದರು. ಹೀಗಾಗಿ ನಟಿಯ ದೂರಿನ ಸಂಬಂಧ ನಿರ್ದೇಶಕನನ್ನು ಮುಂದಿನ ವಾರ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ. 

Stay up to date on all the latest ಬಾಲಿವುಡ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp