ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್

ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ ಗಾಗಿ ಚಂಡೀಗಢಕ್ಕೆ ತೆರಳಿದ್ದ ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ವರುಣ್ ಧವನ್
ವರುಣ್ ಧವನ್

ಮುಂಬೈ: ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ ಗಾಗಿ ಚಂಡೀಗಢಕ್ಕೆ ತೆರಳಿದ್ದ ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಗ್ರೂಪ್ ವಿಡಿಯೋ ಕರೆ ಮೂಲಕ ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸುತ್ತಿರುವ ಚಿತ್ರದೊಂದಿಗೆ ಅವರ ಆರೋಗ್ಯದ ಮಾಹಿತಿಯನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವರುಣ್ ಧವನ್, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲಸಕ್ಕೆ ಮರಳುತ್ತಿದ್ದಂತೆ ಕೋವಿಡ್ -19 ದೃಢಪಟ್ಟಿರುವುದಾಗಿ ಅವರು ಪೋಸ್ಟ್ ಮಾಡಿದ್ದಾರೆ.

ಶೂಟಿಂಗ್ ಮಾಡುವಾಗ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಧವನ್ ಭರವಸೆ ನೀಡಿದ್ದು, ಪ್ರತಿಯೊಬ್ಬರು ಹೆಚ್ಚುವರಿ ಜಾಗರೂಕತೆಯಿಂದ ಇರುವಂತೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com