ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿ' ಸೋಜಾಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿ' ಸೋಜಾ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ರೆಮೋ ಡಿ' ಸೋಜಾ
ರೆಮೋ ಡಿ' ಸೋಜಾ

ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿ' ಸೋಜಾ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಕುಟುಂಬದ ಆಪ್ತ ಮೂಲಗಳ ಪ್ರಕಾರ ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರೆಮೋ ಡಿ' ಸೋಜಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. "ಅವರಿಗೆ ಹೃದಯಾಘಾತವಾಗಿತ್ತು.ಸದ್ಯಕ್ಕೆ ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ ಮತ್ತು ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

"ರೇಸ್ 3" ನಿರ್ದೇಶಕರನ್ನು ಇಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. "ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ವೈದ್ಯರ ನಿಗಾದಲ್ಲಿದ್ದಾರೆ, " ಎಂದು ಮೂಲಗಳು ತಿಳಿಸಿವೆ. "ತುಮ್ ಬಿನ್", "ಕಾಂಟೆ", "ಧೂಮ್", "ರಾಕ್ ಆನ್" ಮತ್ತು "ಯೆ ಜವಾನಿ ಹೈ ದಿವಾನಿ" ಚಿತ್ರಗಳಿಗೆ ಕೆಲಸ ಮಾಡಿದ್ದ  ಡಿ' ಸೋಜಾ ಬಾಲಿವುಡ್‌ನಲ್ಲಿ ಪ್ರಸಿದ್ಧ ನೃತ್ಯ ನಿರ್ದೇಶಕರಲ್ಲಿ ಒಬ್ಬರು.

"ಫಾಲ್ತು", ", "ಎಬಿಸಿಡಿ", "ಎ ಫ್ಲೈಯಿಂಗ್ ಜಾಟ್", "ರೇಸ್ 3" ಮತ್ತು ತೀರಾ ಇತ್ತೀಚೆಗೆ "ಸ್ಟ್ರೀಟ್ ಡ್ಯಾನ್ಸರ್" ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com