ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿಯ ಆಗಮನ!

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ  ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು  ತಮ್ಮ ಎರಡನೇ ಮಗುವನ್ನು

Published: 21st February 2020 11:44 AM  |   Last Updated: 21st February 2020 11:44 AM   |  A+A-


ಶಿಲ್ಪಾ ಶೆಟ್ಟಿ ದಂಪತಿ

Posted By : Raghavendra Adiga
Source : IANS

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ  ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು  ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು.

"ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಪವಾಡದ ಮೂಲಕ ಉತ್ತರವಾಗಿ . ನಮ್ಮ ಪುಟ್ಟ ಏಂಜಲ್ ಆಗಮನವನ್ನು ಘೋಷಿಸಲು ನಮ್ಮ ಹೃದಯ ತುಂಬಿ ಬರುತ್ತಿದೆ.  ಸಮಿಶಾ ಶೆಟ್ಟಿ ಕುಂದ್ರಾ. ಫೆಬ್ರವರಿ 15, 2020 ರಂದು ಜನಿಸಿದ್ದಾಳೆ." ಶಿಲ್ಪಾ ಶೆಟ್ಟಿ ಹೇಳೀದ್ದಾರೆ.

ಶಿಲ್ಪಾ ಮತ್ತು ರಾಜ್ ಅವರು 2009 ರ ನವೆಂಬರ್‌ನಲ್ಲಿ ಮದುವೆಯಾಗಿದ್ದು  ತಮ್ಮ ಮೊದಲ ಮಗ  ವಿಯಾನ್ ಗೆ ಮೇ 2012 ರಲ್ಲಿ ಜನ್ಮ ನೀಡಿದ್ದರು.

ಇನ್ನು ನಟಿ ಶಿಲ್ಪಾ ಶೆಟ್ಟಿ ಬರೋಬ್ಬರಿ 13 ವರ್ಷಗಳ ವಿರಾಮದ ಬಳಿಕ ಶಬ್ಬೀರ್ ಖಾನ್ ಅವರ "ನಿಕಮ್ಮ" ಮೂಲಕ ಸಿನಿಲೋಕಕ್ಕೆ ಕಂ ಬ್ಯಾಕ್ ಹೇಳುತ್ತಿದ್ದಾರೆ.ಈ ಚಿತ್ರದಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಯೂಟ್ಯೂಬ್ ಸೆನ್ಶೇಷನ್ ನಟಿ ನೆ ಶೆರ್ಲಿ ಸೆಟಿಯಾ ನಟಿಸಿದ್ದಾರೆ. ಚಿತ್ರವು ಈ ವರ್ಷ ಜೂನ್ ನಲ್ಲಿ ತೆರೆ ಕಾಣಲಿದೆ. ಅಲ್ಲದೆ ಶಿಲ್ಪಾ  ಪ್ರಿಯದರ್ಶನ್ ಅವರ "ಹಂಗಮಾ 2" ಚಿತ್ರದಲ್ಲಿ ಪರೇಶ್ ರಾವಲ್, ಮೀಜನ್ ಜಾಫೆರಿ ಮತ್ತು ದಕ್ಷಿಣ ಭಾರತ ನಟಿ  ಪ್ರಣಿತಾ ಸುಭಾಷ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ

 

Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp