ಮಲಾಂಗ್ ಪೋಸ್ಟರ್ ಔಟ್: ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ಲಿಪ್ ಲಾಕ್ 

 ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಮಲಾಂಗ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. 

Published: 06th January 2020 01:34 PM  |   Last Updated: 06th January 2020 02:11 PM   |  A+A-


MalangPoster1

ಮಲಾಂಗ್ ಪೋಸ್ಟರ್

Posted By : Nagaraja AB
Source : The New Indian Express

ಮುಂಬೈ:  ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಮಲಾಂಗ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಮೈ ಸೂಸುವ ಸುಂದರ ಸೂರ್ಯ ಕಿರಣಗಳ ನಡುವೆ ಆದಿತ್ಯ ರಾಯ್ ಬೆನ್ನೇರಿ ಕುಳಿತ ತುಂಡುಗೆಯ ದಿಶಾ ಪಟಾನಿ, ಪರಸ್ಪರ ಚುಂಬಿಸುತ್ತಿರುವುದು ಪೋಸ್ಟರ್ ನಲ್ಲಿ ಕಂಡುಬಂದಿದೆ.

ಕುತೂಹಲಕಾರಿ,ಯೌವ್ವನ, ಹುಚ್ಚು, ಪ್ರೀತಿ, ಅದ್ದಕ್ಕಿಂತಲೂ ಹೆಚ್ಚಿನ ಎಲ್ಲಾ ಅಂಶವೂ ಇದರಲ್ಲಿ ಮೇಳೈಸಿದೆ ಎಂದು ನಿರ್ದೇಶಕ ಮೋಹಿತ್ ಸೂರಿ ಟ್ವೀಟ್ ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬುದನ್ನು ಕಾದು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಮಾರಿಷಷ್, ಗೋವಾ ಮತ್ತು ಮುಂಬೈಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಟಿ-  ಸಿರೀಸ್ ನಿರ್ಮಾಣದ ಈ ಚಿತ್ರ ಫೆಬ್ರವರಿ 7 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. 

 

Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp