ರಾಜಕಪೂರ್ ಪುತ್ರಿ ರಿತು ನಂದಾ ನಿಧನ

ಚಿತ್ರನಟ ರಾಜ್ ಕುಪೂರ್ ಅವರ ಹಿರಿಯ ಪುತ್ರಿ ಹಾಗೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದ ಅವರ ಅತ್ತೆ ರಿತು ನಂದಾ ಮಂಗಳವಾರ ನಿಧನರಾಗಿದ್ದಾರೆ.
 

Published: 14th January 2020 02:46 PM  |   Last Updated: 14th January 2020 04:45 PM   |  A+A-


ರಾಜಕಪೂರ್ ಪುತ್ರಿ ರಿತು ನಂದಾ ನಿಧನ

Posted By : Raghavendra Adiga
Source : UNI

ನವದೆಹಲಿ: ಚಿತ್ರನಟ ರಾಜ್ ಕುಪೂರ್ ಅವರ ಹಿರಿಯ ಪುತ್ರಿ ಹಾಗೂ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದ ಅವರ ಅತ್ತೆ ರಿತು ನಂದಾ ಮಂಗಳವಾರ ನಿಧನರಾಗಿದ್ದಾರೆ.

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ನೀತು ಕಪೂರ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

2018ರಲ್ಲಿ ನಿಧನರಾದ ಉದ್ಯಮಿ ರಾಜನ್ ನಂದಾ ಅವರ ಪತ್ನಿಯಾಗಿದ್ದ ರಿತು ದೀರ್ಘಕಾಲದಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪುತ್ರ ನಿಖಿಲ್ ನಂದ ಅವರನ್ನು ಶ್ವೇತಾ ವಿವಾಹವಾಗಿದ್ದರು. 

ರಿತು ನಂದಾ ನಟರಾದ ರಿಷಿ ಕಪೂರ್, ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್ ಅವರ ಸಹೋದರಿ ಮತ್ತು ಸೂಪರ್ ಸ್ಟಾರ್ ರಾಜ್ ಕಪೂರ್ ಅವರ ಪುತ್ರಿ. ಮೃತರಿಗೆ ವಿಮಾ ಏಜೆಂಟ್ ಮತ್ತು ಮಗ ನಿಖಿಲ್ ನಂದಾ ಎಂಬ ಪುತ್ರನಿದ್ದಾರೆ. ಅಲ್ಲದೆ ಅವರು ಶ್ವೇತಾ ಅವರ ಮಕ್ಕಳಾದ ನವ್ಯಾ ನವೆಲಿ ನಂದ ಮತ್ತು ಅಗಸ್ತ್ಯ ನಂದಾ ಅವರ ಅಜ್ಜಿಯಾಗಿದ್ದು ನಟರಾದ ರಣಬೀರ್ ಕಪೂರ್, ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಅವರ ಸೋದರತ್ತೆ ಕೂಡ ಹೌದು.

 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp