ನಿರ್ಭಯಾ ಅಪರಾಧಿಗಳ ಜೊತೆ ಇಂದಿರಾ ಜೈಸಿಂಗ್ ರನ್ನು ಜೈಲಿನಲ್ಲಿರಿಸಬೇಕು: ಕಂಗನಾ ರಣಾವತ್ 

ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

Published: 23rd January 2020 09:41 AM  |   Last Updated: 23rd January 2020 12:23 PM   |  A+A-


Kangana Ranaut-Indira Jaising

ಕಂಗನಾ ರಣಾವತ್ -ಇಂದಿರಾ ಜೈಸಿಂಗ್

Posted By : Sumana Upadhyaya
Source : ANI

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನೀಡಿರುವ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 


ತಮ್ಮ ಪಂಗಾ ಚಿತ್ರದ ಪ್ರಚಾರ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಭಯಾ ಅಪರಾಧಿಗಳ ಜೊತೆಗೆ ಆ ಹೆಂಗಸು ಇಂದಿರಾ ಜೈಸಿಂಗ್ ರನ್ನು ನಾಲ್ಕು ದಿವಸ ಜೈಲಿನಲ್ಲಿರಿಸಬೇಕು. ಅಂತಹ ಮಹಿಳೆಯರೇ ಇಂತಹ ರಾಕ್ಷಸಪ್ರವೃತ್ತಿಯ ಕೊಲೆಗಾರ ಮಕ್ಕಳಿಗೆ ಜನ್ಮ ನೀಡುವುದು ಎಂದು ಆಕ್ರೋಶ ಹೊರಹಾಕಿದರು.


ಇಂದಿರಾ ಜೈಸಿಂಗ್ ಯಾವತ್ತೂ ಕೂಡ ನಿರ್ಭಯಾ ಪೋಷಕರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಲಿಲ್ಲ. ಇಂದು ಅಪರಾಧಿಗಳ ಪರ ವಹಿಸಿ ಮಾತನಾಡುತ್ತಿದ್ದಾರೆ. ಅತ್ಯಾಚಾರಿಗಳನ್ನು ಬೆಂಬಲಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಇಂತವರಿಂದಲೇ ಅಪರಾಧಿಗಳಿಗೆ ಶಿಕ್ಷೆಯಾಗಿ ಅಮಾಯಕರಿಗೆ ನ್ಯಾಯ ಸಿಗಲು ಈ ದೇಶದಲ್ಲಿ ವಿಳಂಬವಾಗುತ್ತಿದೆ ಎಂದು ಕಂಗನಾ ರಣಾವತ್ ನೊಂದು ನುಡಿದರು.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp