ಸಿಎಎ ವಿರುದ್ಧ ನಾಸಿರುದ್ದೀನ್ ಶಾ, ಮೀರಾ ನಾಯರ್ ಸೇರಿ ಹಲವರಿಂದ ಸಹಿ ಪತ್ರ

ಬಾಲಿವುಡ್ ಚಿತ್ರ ನಿರ್ಮಾಪಕಿ ಮೀರಾ ನಾಯರ್, ನಟ  ನಾಸೀರುದ್ದೀನ್ ಶಾ, ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಗಣ್ಯರು ಸಿಎಎ ವಿರುದ್ಧ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ. 
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ

ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕಿ ಮೀರಾ ನಾಯರ್, ನಟ  ನಾಸೀರುದ್ದೀನ್ ಶಾ, ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಗಣ್ಯರು ಸಿಎಎ ವಿರುದ್ಧ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ. 

ನಂದಿತಾ ದಾಸ್, ರತ್ನ ಪಾಠಕ್ ಶಾ, ಜಾವೇದ್  ಜಾಫೇರಿ , ಪಾರ್ಥ ಚಾಟರ್ಜಿ, ಅನಿತಾ ದೇಸಾಯಿ, ಕಿರಣ್ ದೇಸಾಯಿ, ಟಿ.ಎಂ. ಕೃಷ್ಣ, ಅಶಿಸ್ ನಂದಿ, ಗಾಯತ್ರಿ  ಚಕ್ರವರ್ತಿ ಸ್ಪಿವಾಕ್ ಸೇರಿದಂತೆ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕುವ ಮೂಲಕ  ಸಿಎಎ ವಿರುದ್ಧದ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ  ಬೆಂಬಲ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ನಾವು ಇರುವುದಾಗಿ ಸಹಿದಾರರು ಪತ್ರದಲ್ಲಿ ತಿಳಿಸಿದ್ದಾರೆ.

ವೈವಿಧ್ಯಮಯ ಸಮಾಜದ ಭರವಸೆಯೊಂದಿಗೆ  ಸಂವಿಧಾನದ ತತ್ವಗಳನ್ನು ಎತ್ತಿಹಿಡಿದಿರುವ ಅವರ ಸಾಮೂಹಿಕ ಕೂಗಿಗೆ ನಾವು ನಮಸ್ಕರಿಸುತ್ತೇವೆಪ್ರತಿಯೊಬ್ಬರೂ ನಮ್ಮ ತತ್ವಗಳಿಗೆ ನಿಲ್ಲಬೇಕೆಂದು ಒತ್ತಾಯಿಸುವುದಾಗಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com