ಅಲಿಯಾ ಭಟ್, ಹೃತಿಕ್ ರೋಷನ್ ಮತ್ತು ನೀತಾ ಲಲ್ಲಾ ಸೇರಿ 819 ಮಂದಿಗೆ ಅಕಾಡೆಮಿ ಸದಸ್ಯತ್ವದ ಆಹ್ವಾನ 

ಬಾಲಿವುಡ್ ತಾರೆಗಳಾದ ಆಲಿಯಾ ಭಟ್, ಹೃತಿಕ್ ರೋಷನ್ ಮತ್ತು ಕಾಸ್ಟ್ಯೂಮ್ ಡಿಸೈನರ್ ನೀತಾ ಲಲ್ಲಾ  ಅವರು ಸೇರಿದಂತೆ 819 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಒಳಗೊಂಡ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಂಪಿಎಎಸ್) ಗೆ ಸೇರಲು ಆಹ್ವಾನಿತರಾಗಿದ್ದಾರೆ.
ಆಲಿಯಾ ಭಟ್ ಹೃತಿಕ್ ರೋಷನ್ ನೀತಾ ಲಲ್ಲಾ
ಆಲಿಯಾ ಭಟ್ ಹೃತಿಕ್ ರೋಷನ್ ನೀತಾ ಲಲ್ಲಾ

ಲಾಸ್ ಏಂಜಲೀಸ್: ಬಾಲಿವುಡ್ ತಾರೆಗಳಾದ ಆಲಿಯಾ ಭಟ್, ಹೃತಿಕ್ ರೋಷನ್ ಮತ್ತು ಕಾಸ್ಟ್ಯೂಮ್ ಡಿಸೈನರ್ ನೀತಾ ಲಲ್ಲಾ  ಅವರು ಸೇರಿದಂತೆ 819 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಒಳಗೊಂಡ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಂಪಿಎಎಸ್) ಗೆ ಸೇರಲು ಆಹ್ವಾನಿತರಾಗಿದ್ದಾರೆ.

 ಆಲಿಯಾ ಭಟ್ ಕಡೇ ಚಿತ್ರ ಝೋಯಾ ಅಖ್ತರ್  ನಿರ್ದೇಶನದ "ಗಲ್ಲಿ ಬಾಯ್" 2019 ರ ಆಸ್ಕರ್ ಪ್ರಶಸ್ತಿಗೆ ಅತ್ಯುತ್ತಮ ಇಂಟರ್ ನ್ಯಾಷನಲ್ ಫೀಚರ್ ವಿಭಾಗಕ್ಕೆ ಭಾರತದಿಂದ ಪ್ರವೇಶ ಗಿಟ್ಟಿಸಿತ್ತು. ಆದರೆ ಅಂತಿಮ ಐದರ ಪಟ್ಟಿ ಸೇರುವಲ್ಲಿ ಚಿತ್ರ ವಿಫಲವಾಗಿತ್ತು.

ಆಮಂತ್ರಣಗಳನ್ನು ಸ್ವೀಕರಿಸುವ ಭಾರತದ ಇತರ ಪ್ರಮುಖರೆಂದರೆ ನಿರ್ದೇಶಕ ನಂದಿನಿ ಶ್ರೀಕೆಂಟ್, ಸಾಕ್ಷ್ಯಚಿತ್ರ ನಿರ್ಮಾಪಕರಾದ ನಿಷ್ಠ ಜೈನ್ ಮತ್ತು ಅಮಿತ್ ಮಾಧೇಶಿಯಾ, ಶಾಲ್ ಆನಂದ್ ಮತ್ತು ಸಂದೀಪ್ ಕಮಲ್ ಅವರದ್ದಾಗಿದೆ. 68 ದೇಶಗಳ ಕಲಾವಿದರನ್ನು ಈ ಸದಸ್ಯತ್ವಕ್ಕೆ ಆಹ್ವಾನಿಸಲಾಗಿದೆ. ಆಹ್ವಾನವನ್ನು ಸ್ವೀಕರಿಸುವವರಿಗೆ 2021 ರ ಏಪ್ರಿಲ್ 25 ರಂದು ನಡೆಯಲಿರುವ 93 ನೇ ಅಕಾಡೆಮಿ ಪ್ರಶಸ್ತಿಗಾಗಿ ನಡೆಯುವ ಮತದಾನದ ವೇಳೆ ಮತ ಚಲಾವಣೆ ಹಕ್ಕುಲಭಿಸಲಿದೆ.

ಕಳೆದ ವರ್ಷ 2019 ರಲ್ಲಿ ಸಂಸ್ಥೆಯು 842 ಹೊಸ ಸದಸ್ಯರನ್ನು ಆಹ್ವಾನಿಸಿತ್ತು, ಇದರಲ್ಲಿ ಭಾರತೀಯ ನಿರ್ಮಾಪಕರಾದ ಝೋಯಾ  ಅಖ್ತರ್, ಅನುರಾಗ್ ಕಶ್ಯಪ್ ಮತ್ತು ಹಿರಿಯ ನಟ ಅನುಪಮ್ ಖೇರ್ ಸಹ ಸೇರಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com