ನಾನು ಕೂಡ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದೆ: ಸೈಫ್ ಆಲಿ ಖಾನ್

ಬಾಲಿವುಡ್ ನಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಸೈಫ್ ಆಲಿ ಖಾನ್. ಈ ವರ್ಷ ಬಿಡುಗಡೆಯಾದ ಎರಡು ಚಿತ್ರಗಳಾದ ಜವಾನಿ ಜಾನೆಮನ್ ಮತ್ತು ಐತಿಹಾಸಿಕ ಚಿತ್ರ 'ತನ್ಹಾಜಿ: ದ ಅನ್ ಸಂಗ್ ವಾರಿಯರ್' ಚಿತ್ರಗಳೇ ಸಾಕ್ಷಿ. ಎರಡೂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು, ಸೈಫ್ ಅವರ ಪಾತ್ರಗಳು ಜನರಿಗೆ ಮೆಚ್ಚುಗೆಯಾದವು.
ಸೈಫ್ ಆಲಿ ಖಾನ್
ಸೈಫ್ ಆಲಿ ಖಾನ್

ಬಾಲಿವುಡ್ ನಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಸೈಫ್ ಆಲಿ ಖಾನ್. ಈ ವರ್ಷ ಬಿಡುಗಡೆಯಾದ ಎರಡು ಚಿತ್ರಗಳಾದ ಜವಾನಿ ಜಾನೆಮನ್ ಮತ್ತು ಐತಿಹಾಸಿಕ ಚಿತ್ರ 'ತನ್ಹಾಜಿ: ದ ಅನ್ ಸಂಗ್ ವಾರಿಯರ್' ಚಿತ್ರಗಳೇ ಸಾಕ್ಷಿ. ಎರಡೂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು, ಸೈಫ್ ಅವರ ಪಾತ್ರಗಳು ಜನರಿಗೆ ಮೆಚ್ಚುಗೆಯಾದವು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ವೆಬಿನಾರ್ ಕಾರ್ಯಕ್ರಮ ಇಂಡಲ್ಜ್ ಟೈಮ್ ಪಾಸ್ ನಲ್ಲಿ ಪತ್ರಕರ್ತೆ ಕಾವೇರಿ ಬಮ್ಜೈ ಜೊತೆ ಹಲವು ವಿಷಯಗಳ ಬಗ್ಗೆ ಸೈಫ್ ಆಲಿಖಾನ್ ಮಾತನಾಡಿದರು.

ನಾನು ಈ ಲಾಕ್ ಡೌನ್ ಸಮಯದಲ್ಲಿ ಕಳೆದ ಬಹುಮುಖ್ಯ ಸಮಯವೆಂದರೆ ಪುತ್ರ ತೈಮುರು ಜೊತೆ ಕಾಲ ಕಳೆದದ್ದು ಎಂದ ಸೈಫ್ ನಂತರ ಬಾಲಿವುಡ್ ನ ಕರಾಳ ದಿನ ಇತ್ತೀಚೆಗೆ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಕೂಡ ಮಾತನಾಡಿದರು. ಅವರೊಬ್ಬ ಪ್ರತಿಭಾನ್ವಿತ ನಟ ಮತ್ತು ಸ್ಪುರದ್ರೂಪಿ ಕೂಡ. ಆತನಿಗೆ ಉತ್ತಮ ಭವಿಷ್ಯವಿತ್ತು. ನನ್ನ ಜೊತೆ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಅವರೊಂದಿಗೆ ದಿಲ್ ಬೇಚಾರ ಚಿತ್ರದಲ್ಲಿ ನಟಿಸಿದ್ದು ಒಳ್ಳೆಯ ಅನುಭವ ನೀಡಿತ್ತು. ಖಗೋಳಶಾಸ್ತ್ರ, ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿದ್ದರು. ಅವರಿಗೆ ನನಗಿಂತಲೂ ಉತ್ತಮ ಭವಿಷ್ಯವಿತ್ತು ಎಂಬ ಭಾವನೆ ನನ್ನದು, ಅಂತಹ ಒಬ್ಬ ವ್ಯಕ್ತಿ ಇಲ್ಲವಾಗಿದ್ದು ತುಂಬಾ ದುಃಖ ತಂದಿದೆ ಎಂದರು. ದಿಲ್ ಬೆಚಾರ ಸಿನೆಮಾ ಜುಲೈ 24ಕ್ಕೆ ಡಿಸ್ನೆ ಹೊಟ್ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ.

ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತವಿದೆ ಎಂದು ನಟಿ ಕಂಗನಾ ರಾನಾವತ್ ಆರೋಪದ ಬಗ್ಗೆ ಕೇಳಿದಾಗ, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಂಗನಾ ಏನು ಹೇಳಿದರು ಎಂದು ನನಗೆ ಗೊತ್ತಿಲ್ಲ, ಬಾಲಿವುಡ್ ನಲ್ಲಿ ಕರಣ್ ಜೋಹರ್ ಒಂದು ಸ್ಥಾನವನ್ನು ಕಂಡುಕೊಂಡಿದ್ದು, ಇದಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಸತ್ಯ ಯಾವಾಗಲೂ ಕಠಿಣವಾಗಿರುತ್ತದೆ. ಈ ಬಗ್ಗೆ ಜನರಿಗೆ ಆಸಕ್ತಿ ಉಳಿದುಕೊಂಡಿಲ್ಲ, ಇನ್ನು ನಾವು ಹೊಸ ವಿಷಯಗಳತ್ತ ಆಲೋಚನೆ ಮಾಡಬೇಕೆಂಬುದು ನನ್ನ ಭಾವನೆ, ಇದು ಹೊಸದನ್ನು ಯೋಚಿಸುವ ಹೊಸ ವಿಷಯಗಳನ್ನು, ಸವಾಲುಗಳನ್ನು ಎದುರಿಸಿ ಕಲಿತುಕೊಳ್ಳುವ ಸಮಯ ಎಂದರು.

ಭಾರತದಲ್ಲಿ ಅಸಮಾನತೆಯಿದ್ದು ಅವುಗಳನ್ನು ಹೊರತೆಗೆಯಬೇಕು. ಸ್ವಜನಪಕ್ಷಪಾತ, ತಮ್ಮವರ ಬಗ್ಗೆ ಒಲವು, ಗುಂಪು ಕಟ್ಟಿಕೊಳ್ಳುವಿಕೆ ಇವೆಲ್ಲಾ ಬೇರೆ ವಿಷಯ. ನಾನು ಕೂಡ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದೆ, ಆದರೆ ಅದನ್ನು ಯಾರೂ ಮುಂದೆ ಬಂದು ಮಾತನಾಡುವುದಿಲ್ಲ, ಈಗಲಾದರೂ ಚಿತ್ರೋದ್ಯಮದಲ್ಲಿ ಅದನ್ನು ಬಹಿರಂಗವಾಗಿ ಧೈರ್ಯವಾಗಿ ಹೇಳುತ್ತಿದ್ದಾರೆ ಎಂಬುದು ಖುಷಿಯ ವಿಚಾರ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com