ವಿದ್ಯಾ ಬಾಲನ್ ನಟನೆಯ ‘ಶಕುಂತಲಾ ದೇವಿ’ ಚಿತ್ರ ಜುಲೈ 31ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಬಾಲಿವುಡ್ ನಟಿ ವಿದ್ಯಾ ಬಾಲನ್‌ ಅಭಿನಯದ ‘ಶಕುಂತಲಾ ದೇವಿ’ ಹಿಂದಿ ಚಿತ್ರ ಜುಲೈ 31ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

Published: 04th July 2020 04:21 PM  |   Last Updated: 04th July 2020 05:50 PM   |  A+A-


Vidya Balan's Shakuntala Devi

ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಚಿತ್ರ

Posted By : Lingaraj Badiger
Source : The New Indian Express

ಬಾಲಿವುಡ್ ನಟಿ ವಿದ್ಯಾ ಬಾಲನ್‌ ಅಭಿನಯದ ‘ಶಕುಂತಲಾ ದೇವಿ’ ಹಿಂದಿ ಚಿತ್ರ ಜುಲೈ 31ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಶಕುಂತಲಾ ದೇವಿ ಅವರ ಜೀವನ ಆಧಾರಿತ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿತ್ತು. ಕೊನೆಗೆ, ಚಿತ್ರ ನಿರ್ಮಾಪಕರು ಒಟಿಟಿ ವೇದಿಕೆ ಮೂಲಕ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಚಿತ್ರದಲ್ಲಿ ಶಕುಂತಲಾ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ ಬಾಲನ್ ಅವರು ತಮ್ಮ‌ ಇನ್‌ಸ್ಟಾಗ್ರಾಮ್‌ ನಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಬರೆದುಕೊಂಡಿದ್ದಾರೆ.

1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶಕುಂತಲಾ 5 ವರ್ಷ ವಯಸ್ಸಿನಲ್ಲಿದ್ದಾಗಲೇ 18 ವರ್ಷದ ವಿದ್ಯಾರ್ಥಿಗಳ ಲೆಕ್ಕವನ್ನು ಪರಿಹರಿಸಿದ್ದರು. ಆಗಲೇ ಎಲ್ಲರಿಗೂ ಅವರ ಬುದ್ಧಿಮಟ್ಟದ ಪರಿಚಯವಾಗಿದ್ದು. 1982ರಲ್ಲಿ ಶಕುಂತಲಾ ಹೆಸರು 'ದಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್'ನಲ್ಲಿ ಸೇರ್ಪಡೆಯಾಯಿತು. ಗಣಿತ ಪಜಲ್ಸ್, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಶಕುಂತಲಾ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಕಿಡ್ನಿ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶಕುಂತಲಾ ದೇವಿ ಅವರು 2013ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

Stay up to date on all the latest ಬಾಲಿವುಡ್ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp