ನಾನು ಸಾವಿನ ಹಾಸಿಗೆಯಲ್ಲಿದ್ದೇನೆ, ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ: ನಟಿಯ ಭಾವನಾತ್ಮಕ ಪೋಸ್ಟ್

ಬಾಲಿವುಡ್​ ನಟಿ ದಿವ್ಯಾ ಚೌಕ್ಸಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ  ಕ್ಯಾನ್ಸರ್​ನಿಂದ ಬಳಲುತ್ತಿದ್ದರು

Published: 13th July 2020 08:44 AM  |   Last Updated: 13th July 2020 08:44 AM   |  A+A-


Divya Chouksey

ದಿವ್ಯಾ ಚೌಕ್ಸಿ

Posted By : Shilpa D
Source : Online Desk

ಬಾಲಿವುಡ್​ ನಟಿ ದಿವ್ಯಾ ಚೌಕ್ಸಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ  ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ದಿವ್ಯಾ ಸಾಯುವ ಕೆಲವೇ ಹೊತ್ತಿನ ಮುನ್ನಾ ತಮ್ಮದೇ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ. ಸಾಯುವ ಹದಿನೈದು ದಿನದ ಗಂಟೆ ಮುನ್ನಾ ತಮ್ಮ ಸಾವಿನ ಬಗ್ಗೆ ತಾವೇ ಬರೆದುಕೊಂಡಿದ್ದರು. ಸಾವಿಗೂ 15 ಗಂಟೆಗಳ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ದಿವ್ಯಾರನ್ನು ಇಷ್ಟು ಬೇಗ ಕಳೆದುಕೊಂಡವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ತಾರೆಯರು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ದುಃಖದ ನೋವುಗಳನ್ನು ಬರೆದುಕೊಂಡಿದ್ದಾರೆ.

‘ನಾನು ತಿಳಿಯ ಬಯಸುವುದನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ಹೆಚ್ಚು ಕಡಿಮೆ  ತಿಂಗಳುಗಳ ನಂತರ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ. ನಾನು ನಿಮಗೆಲ್ಲರಿಗೂ ಹೇಳುವ ಸಮಯವಿದು. ನಾನು ಮರಣ ಶಯ್ಯೆಯಲ್ಲಿದ್ದೇನೆ, ನಾನು ಬಲಶಾಲಿ. ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ. ದುಃಖವಿಲ್ಲದ ಮತ್ತೊಂದು ಜೀವನ ನನಗಿರಲಿ. ದಯವಿಟ್ಟು ಯಾರು ಪ್ರಶ್ನಿಸಬೇಡಿ’. ಎಂದು ಬರೆದುಕೊಂಡಿದ್ದಾರೆ.

Stay up to date on all the latest ಬಾಲಿವುಡ್ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp