'ಪಾತಾಳ್ ಲೋಕ್' ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಪಾತಾಳ್ ಲೋಕ್' ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆ ಹಾಕಿದ ಹೂಗ್ಲಿ ನಿವಾಸಿ ಕೌಶಿಕ್ ದಾಸ್ ಎಂಬ ವ್ಯಕ್ತಿಯನ್ನು ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್ ನಟಿ ಸ್ವಸ್ತಿಕ ಮುಖರ್ಜಿ
ಬಾಲಿವುಡ್ ನಟಿ ಸ್ವಸ್ತಿಕ ಮುಖರ್ಜಿ

ಕೊಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ಪಾತಾಳ್ ಲೋಕ್' ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆ ಹಾಕಿದ ಹೂಗ್ಲಿ ನಿವಾಸಿ ಕೌಶಿಕ್ ದಾಸ್ ಎಂಬ ವ್ಯಕ್ತಿಯನ್ನು ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವೆಬ್ ಸೈಟ್ ವೊಂದರಲ್ಲಿ  ನಟಿಯ ಬಗ್ಗೆ ನಕಲಿ ಸುದ್ದಿ ಹಾಕಿದ್ದ ಗಾಲ್ಸಿಯ ಪತ್ರಕರ್ತನೊಬ್ಬವನ್ನು ಸಹ ಆರೆಸ್ಟ್ ಮಾಡಲಾಗಿದೆ.

ದಿಲ್ ಬೇಚಾರ ಚಿತ್ರದ ಸಹ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ  ಆತ್ಮಹತ್ಯೆ ಮಾಡಿಕೊಳ್ಳುವುದು ಈಗ ಫ್ಯಾಶನ್ ಆಗಿದೆ ಎಂದು ನಾನು ಹೇಳಿದ್ದಾಗಿ ಸುಳ್ಳು ವರದಿಗಳಾಗಿದ್ದವು, ನಂತರ ಆನ್ ಲೈನ್ ನಲ್ಲಿ ತಮ್ಮ ಮೇಲೆ ಅತ್ಯಾಚಾರ ಹಾಗೂ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಫೇಸ್ ಬುಕ್ ನಲ್ಲಿ ಶುಕ್ರವಾರ ಸ್ವಸ್ತಿಕ ಮುಖರ್ಜಿ ಬರೆದುಕೊಂಡಿದ್ದರು.

ಆನ್ ಲೈನ್ ನಲ್ಲಿ ಸುಳ್ಳು ಸುದ್ದಿ ಹಾಕಿದ್ದ ಗಾಲ್ಸಿಯ ಸುವಂ ಚಕ್ರವರ್ತಿ ಬರ್ಧಮನ್ ನನ್ನು ಸಹ ಕೊಲ್ಕತ್ತಾ ಸೈಬರ್ ಕ್ರೈಮ್ ಇಲಾಖೆ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಸುದ್ದಿಯನ್ನು ಸಾಮಾಜಿಕ  ಜಾಲತಾಣಗಳಲ್ಲಿ ಹಾಕಿರುವುದಾಗಿ ಆತ ಒಪ್ಪಿಕೊಂಡಿರುವುದಾಗಿ ನಟಿ ತಿಳಿಸಿದ್ದಾರೆ.

ಇವನ್ನಲ್ಲದೇ, ನನಗೆ ಆ್ಯಸಿಡ್ ದಾಳಿ ಹಾಗೂ ಅತ್ಯಾಚಾರ ಬೆದರಿಕೆಯ ಸಂದೇಶ ಕಳುಹಿಸಿದ್ದ ಕೌಶಿಕ್ ದಾಸ್ ನನ್ನು  ಬಂಧಿಸಲಾಗಿದೆ. ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇಂತಹ ಕಾರ್ಯ ಕೈಗೊಂಡ ಕೊಲ್ಕತ್ತಾ ಪೊಲೀಸರಿಗೆ ಅಭಿನಂದನೆ ಸಲ್ಲಿಸುವುದಾಗಿ ಸ್ವಸ್ತಿಕ್ ಇನ್ಸಾಟಾಗ್ರಾಮ್ ನಲ್ಲಿ ಇಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com