ಬಾಲಿವುಡ್ ಸಾಹಸ ನಿರ್ದೇಶಕ ಪರ್ವೀಜ್ ಖಾನ್ ನಿಧನ

'ಅಂಧಾಧುನ್’ ಆಕ್ಷನ್ ನಿರ್ದೇಶಕ ಪರ್ವೀಜ್ ಖಾನ್(೫೫) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪರ್ವೀಜ್ ಖಾನ್
ಪರ್ವೀಜ್ ಖಾನ್

ಮುಂಬೈ: 'ಅಂಧಾಧುನ್’ ಆಕ್ಷನ್ ನಿರ್ದೇಶಕ ಪರ್ವೀಜ್ ಖಾನ್(೫೫) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದ ಪರ್ವೀಜ್ ಖಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸ್ವಲ್ಪ ಸಮಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಈ ಹಿಂದೆ ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ ಎಂದು ಅವರ ದೀರ್ಘಕಾಲದ ಸಹಾಯಕ ನಿರ್ದೇಶಕ ನಿಶಾಂತ್ ಖಾನ್ ಹೇಳಿದ್ದಾರೆ.

ಇಂದು ಸಂಜೆ ಕಂದಿವಲಿಯಲ್ಲಿ ಪರ್ವೀಜ್ ಖಾನ್ ಅವರ ಅಂತ್ಯಕ್ರಿಯೆ ನಡೆಯಿತು. ಪರ್ವೀಜ್ ಖಾನ್ ಪತ್ನಿ, ಪುತ್ರನನ್ನು ಅಗಲಿದ್ದಾರೆ. 
ಪರ್ವೀಜ್ ಸಾವಿನ ಬಗ್ಗೆ ನಿರ್ದೇಶಕ ಹನ್ಸಾಲ್ ಮೆಹ್ತಾ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

“ಶಾಹಿದ್ ಚಿತ್ರದಲ್ಲಿ ಪರ್ವೀಜ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಗಲಭೆಯ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಅವರು ಪ್ರತಿಭಾವಂತ, ಒಳ್ಳೆಯ ಮನುಷ್ಯ. ಅವರ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ "ಎಂದು ಹನ್ಸಾಲ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com