ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಹಾಟ್ ಅವತಾರದಲ್ಲಿಯೇ ಪಡ್ಡೆಗಳ ಎದೆ ಝಲ್ ಎನಿಸುವಂಥ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಹುಕಾಲದ ಗೆಳೆಯನ ಜತೆಗೆ ಉಂಗುರ ಬಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮುಂಬೈ ಮೂಲದ ಸ್ಯಾಮ್ ಅಹ್ಮದ್ ಜತೆ ಉಂಗುರು ಬದಲಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಹರಿದಾಡುತ್ತಿದ್ದ ವದಂತಿಗಳಿಗೆ ಲಾಕ್ಡೌನ್ ಹೊತ್ತಲ್ಲೇ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ‘ಬೆಸ್ಟ್ ಫೀಲಿಂಗ್’ ಎಂದಿದ್ದಾರೆ ಪೂನಂ ಪಾಂಡೆ.
ಇತ್ತೀಚೆಗಷ್ಟೇ ಪೂನಂ ಪಾಂಡೆ ಮತ್ತು ಪ್ರಿಯಕರ ಸ್ಯಾಮ್, ಲಾಕ್ಡೌನ್ ಉಲ್ಲಂಘನೆ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಅದೆಲ್ಲದಕ್ಕೂ ತೆರೆಎಳೆದ ಪೂನಂ, ಆ ಹೊತ್ತಿನಲ್ಲಿ ನಾವು ಮನೆಯಲ್ಲಿಯೇ ಟಿವಿ ನೋಡುತ್ತಿದ್ದೇವು ಎಂದಿದ್ದರು.
Advertisement