ಕೊರೋನಾದಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಬಚ್ಚನ್ ಕ್ಲಾಸ್

ನೀವು ಮಹಾಮಾರಿ ಕೊರೋನಾ ವೈರಸ್ ನಿಂದ ಸಾಯ್ತೀರಿ ಎಂಬ ಅನಾಮಧೇಯ ಟ್ರೋಲ್‌ ನಿಂದ ತಾಳ್ಮೆ ಕಳೆದುಕೊಂಡ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು, ನಿಮ್ಮ ಕಿಚ್ಚಿನಲ್ಲಿ ನೀವೇ ಸಾಯುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.

Published: 28th July 2020 10:01 PM  |   Last Updated: 28th July 2020 10:01 PM   |  A+A-


Amitabh Bachchan

ಅಮಿತಾಬ್ ಬಚ್ಚನ್

Posted By : Lingaraj Badiger
Source : PTI

ಮುಂಬೈ: ನೀವು ಮಹಾಮಾರಿ ಕೊರೋನಾ ವೈರಸ್ ನಿಂದ ಸಾಯ್ತೀರಿ ಎಂಬ ಅನಾಮಧೇಯ ಟ್ರೋಲ್‌ ನಿಂದ ತಾಳ್ಮೆ ಕಳೆದುಕೊಂಡ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು, ನಿಮ್ಮ ಕಿಚ್ಚಿನಲ್ಲಿ ನೀವೇ ಸಾಯುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಬಹಿರಂಗ ಪತ್ರ ಬರೆಯುವ ಮೂಲಕ ಟ್ರೋಲಿಗರಿಗೆ ಚಾಟಿ ಬೀಸಿರುವ ಬಿಗ್ ಬಿ, "ಮಿಸ್ಟರ್ ಅನಾಮಧೇಯ", ನನ್ನತಂಹ ಸ್ಟಾರ್ ವಿರುದ್ಧ ಆಕ್ರಮಣಕಾರಿ ಟ್ರೋಲ್ ಮಾಡುವ ಮೂಲಕ ಸ್ವಯಂ ಪ್ರಾಮುಖ್ಯತೆಯನ್ನು ಪಡೆಯಲು ಯತ್ನಿಸುತ್ತಿದ್ದೀರಿ. ಈಗಿರುವುದು ಎರಡೇ ಸಾಧ್ಯತೆ. ನಾನು ಸಾಯಬೇಕು, ಅಥವಾ ಬದುಕಬೇಕು. ನಾನು ಸತ್ತರೆ ನನ್ನ ಮೇಲೆ ವಾಗ್ದಾಳಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ ತಮ್ಮ ಅಭಿಮಾನಿಗಳನ್ನು ಮತ್ತು ಫಾಲೋವರ್ಸ್‌ಗಳನ್ನು ನೆನಪಿಸಿಕೊಂಡ ಅಮಿತಾಭ್ ಬಚ್ಚನ್ ಅವರು. ಅವರೆಲ್ಲರೂ ನನ್ನ ಕುಟುಂಬ ಎಂದಿದ್ದಾರೆ.

77 ವರ್ಷದ ಬಿಗ್ ಬಿ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಜುಲೈ 11ರಂದು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Stay up to date on all the latest ಬಾಲಿವುಡ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp