ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆಗೆ ಒತ್ತಡ- ಸಾಕ್ಷಿದಾರ ಸಿದ್ದಾರ್ಥ್!
ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರ ಪೊಲೀಸರಿಗೆ ಹೇಳಿಕೆ ನೀಡುವಂತೆ ದಿವಂಗತ ನಟನ ಕುಟುಂಬದ ಸದಸ್ಯರಿಂದ ಕರೆಗಳು ಬರುತ್ತಿರುವುದಾಗಿ ಸುಶಾಂತ್ ಸಿಂಗ್ ಆಪ್ತ ಸ್ನೇಹಿತ ಹಾಗೂ ಸಾವಿನ ಪ್ರಕರಣದ ಪ್ರಮುಖ ಸಾಕ್ಷಿದಾರ ಸಿದ್ದಾರ್ಥ್ ಪಿಥಾನಿ ಮುಂಬೈ ಪೊಲೀಸರಿಗೆ ಹೇಳಿದ್ದಾರೆ.
Published: 31st July 2020 04:03 PM | Last Updated: 31st July 2020 04:09 PM | A+A A-

ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ
ಮುಂಬೈ: ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರ ಪೊಲೀಸರಿಗೆ ಹೇಳಿಕೆ ನೀಡುವಂತೆ ದಿವಂಗತ ನಟನ ಕುಟುಂಬದ ಸದಸ್ಯರಿಂದ ಕರೆಗಳು ಬರುತ್ತಿರುವುದಾಗಿ ಸುಶಾಂತ್ ಸಿಂಗ್ ಆಪ್ತ ಸ್ನೇಹಿತ ಹಾಗೂ ಸಾವಿನ ಪ್ರಕರಣದ ಪ್ರಮುಖ ಸಾಕ್ಷಿದಾರ ಸಿದ್ದಾರ್ಥ್ ಪಿಥಾನಿ ಮುಂಬೈ ಪೊಲೀಸರಿಗೆ ಹೇಳಿದ್ದಾರೆ.
ಜುಲೈ 28 ರಂದು ಮುಂಬೈ ಪೊಲೀಸರಿಗೆ ಇ-ಮೇಲ್ ಮಾಡಿರುವ ಸಿದ್ಧಾರ್ಥ್, ಸುಶಾಂತ್ ಸಿಂಗ್ ಕುಟುಂಬದ ಕಡೆಯಿಂದ ಮೂರು ಕರೆಗಳು ಬಂದಿದ್ದು, ರಿಯಾ ಚಕ್ರವರ್ತಿ ರಜಪೂತ್ ಮನೆಯಲ್ಲಿರುವಾಗ ಹೇಗೆಲ್ಲಾ ವೆಚ್ಚ ಮಾಡಿಸುತ್ತಿದ್ದಳು ಎಂಬುದನ್ನು ಪೊಲೀಸರಿಗೆ ಹೇಳುವಂತೆ ಪೀಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಮತ್ತು ಸಂಬಂಧಿ ಓಪಿ ಸಿಂಗ್, ಜುಲೈ 22 ರಂದು ಹಾಗೂ 27 ರಂದು ಅಪರಿಚಿತ ಸಂಖ್ಯೆಯಿಂದ ಕಾನ್ಫರೆನ್ಸ್ ಕರೆ ಮಾಡಿದ್ದು, ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸಿದಾರ್ಥ್ ಹೇಳಿದ್ದಾರೆ.
ಬಿಹಾರದಲ್ಲಿ ದಾಖಲಿಸಿರುವ ಎಫ್ ಐಆರ್ ನ್ನು ಮುಂಬೈಗೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ಪ್ರತಿ ಕೂಡಾ ಸಿದ್ದಾರ್ಥ್ ಮೇಲ್ ನಲ್ಲಿ ಕಂಡುಬಂದಿದೆ.
ಮಂಗಳವಾರ ಮುಂಬೈಗೆ ಆಗಮಿಸಿರುವ ಬಿಹಾರ ಪೊಲೀಸರ ತಂಡ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಸೇರಿದಂತೆ ಇಬ್ಬರ ಹೇಳಿಕೆಗಳನ್ನು ಪಡೆದುಕೊಂಡಿದೆ. ಸುಶಾಂತ್ ಸಿಂಗ್ ತಂದೆ ರಿಯಾ ಚಕ್ರವರ್ತಿ ವಿರುದ್ಧ ಮಂಗಳವಾರ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದ್ದರು.
ಮುಂಬೈ ಪೊಲೀಸರ ಪ್ರಕಾರ, ಇಲ್ಲಿಯವರೆಗೂ ಬಾಲಿವುಡ್ ಚಿತ್ರ ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ, ಮಹೇಶ್ ಭಟ್ ಸೇರಿದಂತೆ 41 ಜನರ ಹೇಳಿಕೆಯನ್ನು ಪಡೆಯಲಾಗಿದೆ.