ಸುಶಾಂತ್ ಸಿಂಗ್ ರಜಪೂತ್ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೆ, ಜೂ.8ಕ್ಕೆ ಮನೆ ಬಿಟ್ಟಿದ್ದೆ: ರಿಯಾ ಚಕ್ರವರ್ತಿ

ತಾನು ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಒಂದು ವರ್ಷ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿ ಇದ್ದೆ, ಅವರು ಮುಂಬೈ ನಿವಾಸದಲ್ಲಿ ಸಾಯುವುದಕ್ಕೆ 6 ದಿನ ಮೊದಲಷ್ಟೇ ಬೇರೆಡೆಗೆ ನನ್ನ ವಾಸಸ್ಥಳವನ್ನು ಬದಲಾಯಿಸಿದ್ದೆ ಎಂದು ನಟನ ಸ್ನೇಹಿತೆ ರಿಯಾ ಚಕ್ರವರ್ತಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.

Published: 31st July 2020 09:51 AM  |   Last Updated: 31st July 2020 09:51 AM   |  A+A-


Sushanth Singh Rajaput and Rhea Chakravarthy(File photo)

ಸುಶಾಂತ್ ಸಿಂಗ್ ರಜಪೂತ್ ಮತ್ತು ರಿಯಾ ಚಕ್ರವರ್ತಿ(ಸಂಗ್ರಹ ಚಿತ್ರ)

Posted By : Sumana Upadhyaya
Source : IANS

ನವದೆಹಲಿ: ತಾನು ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಒಂದು ವರ್ಷ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿ ಇದ್ದೆ, ಅವರು ಮುಂಬೈ ನಿವಾಸದಲ್ಲಿ ಸಾಯುವುದಕ್ಕೆ 6 ದಿನ ಮೊದಲಷ್ಟೇ ಬೇರೆಡೆಗೆ ನನ್ನ ವಾಸಸ್ಥಳವನ್ನು ಬದಲಾಯಿಸಿದ್ದೆ ಎಂದು ನಟನ ಸ್ನೇಹಿತೆ ರಿಯಾ ಚಕ್ರವರ್ತಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಹಿಂದೆ ಆತನ ಗರ್ಲ್ ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಪಾತ್ರವಿದೆ ಎಂದು ಆರೋಪಿಸಿ ನಟನ ಕುಟುಂಬಸ್ಥರು ಪಾಟ್ನಾ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆಯನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿರುವ ರಿಯಾ ಚಕ್ರವರ್ತಿ, ಅದರಲ್ಲಿ ತಾನು ಮತ್ತು ಸುಶಾಂತ್ ಜೂನ್ 8ರವರೆಗೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೆವು. ಅದಾದ ಬಳಿಕ ನಾನು ತಾತ್ಕಾಲಿಕವಾಗಿ ಬೇರೆಡೆಗೆ ವಾಸಸ್ಥಳವನ್ನು ವರ್ಗಾಯಿಸಿಕೊಂಡೆ, ಅವರ ತಂದೆ ತಪ್ಪಾಗಿ ಹೇಳಿಕೆ ನೀಡಿದ್ದಾರೆ. ತಾನು ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಂತರ ಜೂನ್ 14ರಂದು ಮುಂಬೈಯ ನಿವಾಸದಲ್ಲಿ ಮೃತಪಟ್ಟಿದ್ದು ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ನಂತರ ಇದು ಭಾರೀ ವಿವಾದ ಹುಟ್ಟಿಸಿ ಬಾಲಿವುಡ್ ಸಿನೆಮಾ ಜಗತ್ತಿನ ಸ್ವಜನಪಕ್ಷಪಾತ ಧೋರಣೆಯಿಂದಾಗಿ ನೊಂದು ಖಿನ್ನತೆಗೊಳಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಶಂಕಿಸಿದ್ದಾರೆ. ಇದೀಗ ಅವರ ಕುಟುಂಬಸ್ಥರು ಕೂಡ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಕೊಲೆಯೆಂಬ ಅರ್ಥದಲ್ಲಿ ಆರೋಪ ಮಾಡುತ್ತಿದ್ದಾರೆ.

ಪ್ರಕರಣ ಸಂಬಂಧ ಮುಂಬೈ ಪೊಲೀಸರು ಈಗಾಗಲೇ ರಿಯಾ ಚಕ್ರವರ್ತಿ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕ ಆದಿತ್ಯ ಚೋಪ್ರಾ, ನಿರ್ದೇಶಕ ಮುಕೇಶ್ ಛಬ್ರೆ, ಶೇಖರ್ ಕಪೂರ್, ಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರನ್ನು ವಿಚಾರಣೆ ನಡೆಸಿದ್ದಾರೆ.

Stay up to date on all the latest ಬಾಲಿವುಡ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp