ಲಾಕ್ ಡೌನ್ ವೇಳೆ ತಂಗಿಗಾಗಿ ಚಾರ್ಟರ್ ವಿಮಾನ ಬುಕ್ ಮಾಡಿಲ್ಲ; ಸುಳ್ಳು ವರದಿಗಳ ವಿರುದ್ಧ ಕಾನೂನು ಕ್ರಮ: ಅಕ್ಷಯ್ ಕುಮಾರ್

ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ವಿಶೇಷ  ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು. 

Published: 01st June 2020 11:22 AM  |   Last Updated: 01st June 2020 12:33 PM   |  A+A-


AkshayKumar

ಅಕ್ಷಯ್ ಕುಮಾರ್

Posted By : Nagaraja AB
Source : Online Desk

ಮುಂಬೈ: ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ವಿಶೇಷ  ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು. 

ಇದನ್ನು ನಿರಾಕರಿಸಿರುವ ಅಕ್ಷಯ್ ಕುಮಾರ್, ಭಾನುವಾರ ರಾತ್ರಿ ಟ್ವೀಟ್ ಮಾಡುವ ಮೂಲಕ ಇವೆಲ್ಲಾ ಸುಳ್ಳು ವರದಿಗಳು, ತಾವು ಸಹೋದರಿ ಹಾಗೂ ಆಕೆಯ ಮಗುವಿಗಾಗಿ ಯಾವುದೇ ರೀತಿಯ ವಿಮಾನವನ್ನು ಕಾಯ್ದಿರಿಸಿರಲಿಲ್ಲ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.  ಸುಳ್ಳು ಸುದ್ದಿಗಳನ್ನು  ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಲಾಕ್ ಡೌನ್ ಜಾರಿಯಾದ ನಂತರ ತಮ್ಮ ತಂಗಿ ಎಲ್ಲಿಯೂ ಪ್ರವಾಸ ಮಾಡಿಲ್ಲ, ಆಕೆಗೆ ಕೇವಲ ಒಂದು ಮಗುವಿಗೆ ಎಂದು 52 ವರ್ಷದ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.  ಆದರೆ, ಆಕೆಗೆ ಎರಡು ಮಗು ಇರುವುದಾಗಿ ವರದಿ ಮಾಡಲಾಗಿತ್ತು.

Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp