ಕೊರೋನಾ ಸೋಂಕಿನಿಂದ ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ ನಿಧನ

ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ (77) ಗುರುವಾರ ಕೊರೊನಾ ವೈರಸ್ ಸೋಂಕಿನಿಂದ ನಿಧನರಾಗಿದ್ದಾರೆ. 'ಕರ್ಮಯೋಗಿ' ಮತ್ತು 'ರಾಜ್ ತಿಲಕ್'ನಂತಹ ಹೆಸರಾಂತ ಚಿತ್ರಗಳನ್ನು ಅನಿಲ್‌ ಸೂರಿ ನಿರ್ಮಾಣ  ಮಾಡಿದ್ದರು

Published: 06th June 2020 08:43 AM  |   Last Updated: 06th June 2020 12:32 PM   |  A+A-


Anil suri

ಅನಿಲ್ ಸೂರಿ

Posted By : Shilpa D
Source : PTI

ಮುಂಬಯಿ: ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ (77) ಗುರುವಾರ ಕೊರೊನಾ ವೈರಸ್ ಸೋಂಕಿನಿಂದ ನಿಧನರಾಗಿದ್ದಾರೆ. 'ಕರ್ಮಯೋಗಿ' ಮತ್ತು 'ರಾಜ್ ತಿಲಕ್'ನಂತಹ ಹೆಸರಾಂತ ಚಿತ್ರಗಳನ್ನು ಅನಿಲ್‌ ಸೂರಿ ನಿರ್ಮಾಣ  ಮಾಡಿದ್ದರು.

ಜೂನ್ 2 ರಂದು ಅನಿಲ್ ಅವರಿಗೆ ಜ್ವರ ಕಾಣಿಸಿಕೊಂಡಿತಂತೆ. ಆದರೆ ಮಾರನೇಯ ದಿನವೇ ಉಸಿರಾಟದ ಸಮಸ್ಯೆ ತೀರ್ವವಾಯಿತು ಎಂದು ಅವರ ಸಹೋದರ ರಾಜೀವ್ ಸೂರಿ ಹೇಳಿದ್ದಾರೆ.

ಜೂನ್ 3 ರಂದು ಮುಂಬೈನ ಖ್ಯಾತ ಆಸ್ಪತ್ರೆಗಳಾದ ಲೀಲಾವತಿ, ಹಿಂದೂಜಾ ಆಸ್ಪತ್ರೆಗಳಿಗೆ ಅವರನ್ನು ಕರೆದುಕೊಂಡು ಹೋಗಲಾಗಿದೆ. ಆದರೆ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವಂತೆ.

ಕೊನೆಗೆ ಬುಧವಾರ ರಾತ್ರಿ ವೇಳೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಆದರೆ ಗುರುವಾರ ಸಂಜೆ 7 ಗಂಟೆ ವೇಳೆಗೆ ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ನಿಯಮಗಳಾನುಸಾರ ಕೆಲವೇ ಮಂದಿ ಉಪಸ್ಥಿತಿಯಲ್ಲಿ ಅವರ ಅಂತಿಮ ಕ್ರಿಯೆ ಮಾಡಲಾಗುತ್ತದೆ.

Stay up to date on all the latest ಬಾಲಿವುಡ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp