ಎಫ್ಐಆರ್ ದಾಖಲಾದ ನಂತರ 'ಟ್ರಿಪಲ್ ಎಕ್ಸ್-2'ವೆಬ್ ಸಿರೀಸ್ ನಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಿದ ಎಕ್ತಾ ಕಪೂರ್

ಭಾರೀ ವಿವಾದ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್ ಟ್ರಿಪಲ್ ಎಕ್ಸ್-2 ವೆಬ್ ಸಿರೀಸ್ ನಲ್ಲಿನ ವಿವಾದಿತ ದೃಶ್ಯಗಳನ್ನು ತೆಗೆದುಹಾಕಿದ್ದಾರೆ.
ಎಕ್ತಾ ಕಪೂರ್
ಎಕ್ತಾ ಕಪೂರ್

ಮುಂಬೈ:ಭಾರೀ ವಿವಾದ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್ ಟ್ರಿಪಲ್ ಎಕ್ಸ್-2 ವೆಬ್ ಸಿರೀಸ್ ನಲ್ಲಿನ ವಿವಾದಿತ ದೃಶ್ಯಗಳನ್ನು ತೆಗೆದುಹಾಕಿದ್ದಾರೆ.

ವಿವಾದಿತ ದೃಶ್ಯದಲ್ಲಿ ಸೇನಾಧಿಕಾರಿಯೊಬ್ಬರ ಪತ್ನಿಗೆ ಅಕ್ರಮ ಸಂಬಂಧವಿರುತ್ತದೆ. ಅಲ್ಲದೆ ಆ ದೃಶ್ಯದಲ್ಲಿ ಸೇನೆಯ ಸಮವಸ್ತ್ರ ಹರಿದಿರುತ್ತದೆ, ಇದು ಭಾರತೀಯ ಸೇನೆ ಮತ್ತು ಯೋಧರಿಗೆ ಮಾಡಿದ ಅವಮಾನ ಎಂದು ಆರೋಪಿಸಿ ಭಾರೀ ವಿವಾದ ಸೃಷ್ಟಿಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಕ್ತಾ ಕಪೂರ್, ನಮಗೆ ಭಾರತೀಯ ಸೇನೆ ಬಗ್ಗೆ ಅಪಾರ ಗೌರವವಿದೆ. ನಮ್ಮ ಕ್ಷೇಮ ಮತ್ತು ಸುರಕ್ಷತೆಗಾಗಿ ಅವರ ಸೇವೆ ಅಗಣಿತ. ವಿವಾದ ಎಬ್ಬಿಸಿರುವ ದೃಶ್ಯಗಳನ್ನು ತೆಗೆದುಹಾಕಿದ್ದೇವೆ. ಆದರೆ ಟ್ರೋಲ್ ಗಳ ಮೂಲಕ ನಮ್ಮ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡುವುದು, ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ವೆಬ್ ಸಿರೀಸ್ ನಲ್ಲಿ ಭಾರತೀಯ ಸೇನೆಗೆ ಎಕ್ತಾ ಕಪೂರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಯೂ ಟ್ಯೂಬರ್ ವಿಕಾಸ್ ಪಾಠಕ್ ಗುರುಗ್ರಾಮ್ ನಲ್ಲಿ ಎಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಎಫ್ ಐಆರ್ ದಾಖಲಾಗಿತ್ತು.

ಎಕ್ತಾ ಕಪೂರ್ ವಿರುದ್ಧ #ALTBalaji_Insults_Army ಎಂಬ ಹ್ಯಾಶ್ ಟಾಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಕಳೆದ ಮಂಗಳವಾರದಿಂದ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com