ಪಾಟ್ನಾದ ಬೀದಿಗಳಲ್ಲಿ ಬೆಳೆದು ಕಷ್ಟಪಟ್ಟು ಮುಂದೆ ಬಂದಿದ್ದ ನಟ ಸುಶಾಂತ್ ಸಿಂಗ್! ವಿಧಿಯಾಟಕ್ಕೆ ಹುಟ್ಟೂರಿನ ಜನರ ಆಕ್ರೋಶ

ಬಿಹಾರದ ರಾಜಧಾನಿ ಪಾಟ್ನಾದ ಬೀದಿಗಳಲ್ಲಿ ಬೆಳೆದು ಬಾಲಿವುಡ್  ತಾರೆಯಾಗಿ ಮಿನುಗುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ನೋವು ಸ್ಥಳೀಯ ಜನತೆಯನ್ನು ಕಾಡುತ್ತಿದೆ
ನಟ ಸುಶಾಂತ್ ಸಿಂಗ್
ನಟ ಸುಶಾಂತ್ ಸಿಂಗ್

ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಬೀದಿಗಳಲ್ಲಿ ಬೆಳೆದು ಬಾಲಿವುಡ್  ತಾರೆಯಾಗಿ ಮಿನುಗುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ನೋವು ಸ್ಥಳೀಯ ಜನತೆಯನ್ನು ಕಾಡುತ್ತಿದೆ.  ಕಷ್ಟಪಟ್ಟು ಮುಂದೆ ಬಂದಿದ್ದ ಸುಶಾಂತ್ ಸಿಂಗ್ ಇನ್ನೂ ಮುಂದೆ ಬೆಳ್ಳಿ ಪರದೆಯಲ್ಲಿ ಬರಲ್ಲ, ಅಥವಾ ಹುಟ್ಟೂರಿಗೆ ಮತ್ತೆ ಬರಲ್ಲ ಎಂಬುದನ್ನು ಅಲ್ಲಿನ ಜನತೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ಸುಶಾಂತ್ ಸಿಂಗ್ ಗೆ ಬಿಹಾರದೊಂದಿಗೆ ಆಳವಾದ ಬಾಂಧವ್ಯವಿತ್ತು.ಪಾಟ್ನಾದ ಸೆಂಟ್ ಕರೇನ್ಸ್ ಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದಿದ್ದ ಸುಶಾಂತ್, 2001ರಲ್ಲಿ ಹತ್ತನೆ ತರಗತಿ ಶಿಕ್ಷಣ ಪೂರೈಸಿ ಮುಂದಿನ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದ್ದರು. ಇದೀಗ ಅವರು ಸಾವನ್ನಪ್ಪಿರುವುದನ್ನು ಅಲ್ಲಿನ ಶಿಕ್ಷಕರು ನಂಬಲಿಕ್ಕೆ ಆಗುತ್ತಿಲ್ಲ.

ಸುಶಾಂತ್ ಚೆನ್ನಾಗಿ ಓದುತ್ತಿದ್ದ. ಶಾಲಾ ವೇಳೆಯಲ್ಲಿ ಕ್ರಿಕೆಟ್ ಆಡಲು ಇಷ್ಟಪಡುತ್ತಿದ್ದ. ಬಾಲ್ಯದಿಂದಲೂ ಚಟುವಟಿಕೆಯಿಂದ ಕೂಡಿರುತ್ತಿದ್ದ ಎಂದು ಆತನಿಗೆ ಶಿಕ್ಷಣ ಹೇಳಿಕೊಟ್ಟ ಶಿಕ್ಷಕರು ಹೇಳುತ್ತಾರೆ. ಸುಶಾಂತ್ ಸಿಂಗ್ ಸಾವಿನ ಸುದ್ದಿಯಿಂದ ಎಲ್ಲ ಶಿಕ್ಷಕರು ಆತಂಕಗೊಂಡಿದ್ದಾರೆ ಎಂದು ಸೆಂಟ್  ಕೆರೆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಸೀಮಾ ಸಿಂಗ್ ಹೇಳಿದ್ದಾರೆ. 

ಪಾಟ್ನಾದಲ್ಲಿ ಆರಂಭಿಕ ಶಿಕ್ಷಣ ಪಡೆದ ನಂತರ ನವದೆಹಲಿಯ ಕುಲಾಚಿ ಹಂಸರಾಜ್ ಮಾಡೆಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸುಶಾಂತ್, ದೆಹಲಿಯ ಎಂಜಿನಿಯರಿಂಗ್ ಕಾಲೇಜಿನಲಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದುಕೊಂಡಿದ್ದರು. ಬ್ಯಾಕಪ್ ನೃತ್ಯಗಾರನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ನಂತರ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. 'ಪವಿತ್ರಾ ರಿಸ್ತಾ' ಧಾರವಾಹಿ ಸುಶಾಂತ್ ವೃತ್ತಿ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿತ್ತು. 

ಅನೇಕ ಡ್ಯಾನ್ಸ್  ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸುಶಾಂತ್ ಕಡಿಮೆ ಅವಧಿಯಲ್ಲಿಯೇ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದರು. 2013ರಲ್ಲಿ ಕಾಯ್ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್,  ಕೆದಾರ್ ನಾಥ್, ಶುದ್ದ್ ದೇಸಿ ರೊಮ್ಯಾನ್ಸ್, ಚಿಚ್ಚೊರಿ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2016ರಲ್ಲಿ ಬಿಡುಗಡೆಯಾದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿನ ಪ್ರಮುಖ ಪಾತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. 

ವರ್ಷದ ಹಿಂದೆ ಹುಟ್ಟೂರು ಬಿಹಾರದ ಪೂರ್ನಿಯಾ ಜಿಲ್ಲೆಯ ಬಾದ್ರಾ ಕೊಟ್ಟಿಗೆ ಭೇಟಿ ನೀಡಿದ್ದ ಸುಶಾಂತ್ ಅವರಿಗೆ ಜನರಿಂದ ಭವ್ಯ ಸ್ವಾಗತ ದೊರಕಿತ್ತು. ಇದೀಗ ಅವರ ನಿಧನದ ಸುದ್ದಿಯಿಂದ ಊರಿನಲ್ಲಿ ದು:ಖದ ಛಾಯೆ ಆವರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com