ಡಯಾಬಿಟಿಸ್, ಕ್ಯಾನ್ಸರ್ ನಂತೆ ಖಿನ್ನತೆ ಕೂಡ ಒಂದು ಕಾಯಿಲೆ: ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾವು ಈ ಹಿಂದೆ ಅನುಭವಿಸಿದ್ದ ಖಿನ್ನತೆ ಬಗ್ಗೆ ಹಲವಾರು ಬಾರಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಮೊನ್ನೆ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ ಅನ್ನುವ ವಿಷಯ ಬಹಳವಾಗಿ ಚರ್ಚೆಯಾಗುತ್ತಿದೆ.

Published: 18th June 2020 02:01 PM  |   Last Updated: 18th June 2020 02:27 PM   |  A+A-


Deepika Padukone

ದೀಪಿಕಾ ಪಡುಕೋಣೆ

Posted By : sumana
Source : ANI

ನವದೆಹಲಿ:ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾವು ಈ ಹಿಂದೆ ಅನುಭವಿಸಿದ್ದ ಖಿನ್ನತೆ ಬಗ್ಗೆ ಹಲವಾರು ಬಾರಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಮೊನ್ನೆ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ ಅನ್ನುವ ವಿಷಯ ಬಹಳವಾಗಿ ಚರ್ಚೆಯಾಗುತ್ತಿದೆ.

ಈ ಬಗ್ಗೆ ದೀಪಿಕಾ ಪಡುಕೋಣೆ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಮಾನಸಿಕ ಖಿನ್ನತೆ ಬಗ್ಗೆ ಸಂದೇಶ ನೀಡಿರುವ ಅವರು, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಕಾಯಿಲೆಗಳಂತೆ ಖಿನ್ನತೆ ಸಹ ಒಂದು ಕಾಯಿಲೆ. ಇದನ್ನು ಮುಕ್ತವಾಗಿ ಹೇಳಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಉತ್ತಮ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು, ಅವರ ಆತ್ಮಹತ್ಯೆಗೆ ಅದುವೇ ಮುಖ್ಯ ಕಾರಣ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಖಿನ್ನತೆಗೆ ಏನು ಮಾಡಬೇಕು, ಏನು ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಸಂದೇಶ ನೀಡುತ್ತಲೇ ಬಂದಿದ್ದಾರೆ. ಅವರೊಡನೆ ಹಲವರು ತಮ್ಮ ಸ್ವಂತ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

2015ರಲ್ಲಿ ದೀಪಿಕಾ ಖಿನ್ನತೆ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಪರಿಹಾರಕ್ಕೆಂದು ಲಿವ್ ಲವ್ ಲಾಫ್ ಫೌಂಡೇಶನ್ (ಟಿಎಲ್ಎಲ್ಎಲ್ಎಫ್)ನ್ನು ಆರಂಭಿಸಿದ್ದರು.

Stay up to date on all the latest ಬಾಲಿವುಡ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp