ಸುಶಾಂತ್ ಸಿಂಗ್ ಬಾಲ್ಯ ಕಳೆದಿದ್ದ ಪಾಟ್ನಾದ ಮನೆ ಸ್ಮಾರಕವಾಗಿ ಪರಿವರ್ತನೆ!

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜೂಪತ್ ಬಾಲ್ಯವನ್ನು ಕಳೆದಿದ್ದ ಪಾಟ್ನಾದಲ್ಲಿನ ಮನೆಯನ್ನು ಸ್ಮಾಕರವಾಗಿ ಪರಿವರ್ತಿಸಲಾಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುಶಾಂತ್ ಸಿಂಗ್ ಹೆಸರಿನಲ್ಲಿ ಫೌಂಡೇಶನ್ ವೊಂದನ್ನು ಸ್ಥಾಪಿಸುವುದಾಗಿ ಆತನ ಕುಟುಂಬ ತಿಳಿಸಿದೆ.
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್

ಮುಂಬೈ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜೂಪತ್ ಬಾಲ್ಯವನ್ನು ಕಳೆದಿದ್ದ ಪಾಟ್ನಾದಲ್ಲಿನ ಮನೆಯನ್ನು ಸ್ಮಾಕರವಾಗಿ ಪರಿವರ್ತಿಸಲಾಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುಶಾಂತ್ ಸಿಂಗ್ ಹೆಸರಿನಲ್ಲಿ ಫೌಂಡೇಶನ್ ವೊಂದನ್ನು ಸ್ಥಾಪಿಸುವುದಾಗಿ ಆತನ ಕುಟುಂಬ ತಿಳಿಸಿದೆ.

ಜೂನ್ 14 ರಂದು ಸುಶಾಂತ್ ಸಿಂಗ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಂದ್ರಾದಲ್ಲಿನ ನಿವಾಸದಲ್ಲಿ ಶನಿವಾರ ಶ್ರದ್ದಾ ಕಾರ್ಯಕ್ರಮ ನಡೆಯಿತು. ರಜಪೂತರ ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು 'ಆತನ ನೆನಪುಗಳನ್ನು ಜೀವಂತವಾಗಿಡಲು' ನಿರ್ವಹಿಸಲಾಗುವುದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಸುಶಾಂತ್ ಸಿಂಗ್ ಬಾಲ್ಯವನ್ನು ಕಳೆದಿದ್ದ  ಪಾಟ್ನಾದ ರಾಜೀವ್ ನಗರದ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗುವುದು, ಅಲ್ಲಿನ ಆತನ ಪುಸ್ತಕಗಳು, ಟೆಲಿಸ್ಕೂಪ್ ,ಫ್ಲೈಟ್-ಸಿಮ್ಯುಲೇಟರ್ ಮತ್ತಿತರ ವಸ್ತುಗಳನ್ನು ಪ್ರದರ್ಶನಕ್ಕೀಡಲಾಗುತ್ತಿದೆ. 

ಸುಶಾಂತ್ ಸಿಂಗ್ ನೆನಪಿಗಾಗಿ  ಸುಶಾಂತ್ ಸಿಂಗ್ ರಜಪೂತ್ ಫೌಂಡೇಶನ್  ಸ್ಥಾಪಿಸುವ ಮೂಲಕ ಆತನ ಹೃದಯಕ್ಕೆ ಹತ್ತಿರವಾಗಿದ್ದ ಸಿನಿಮಾ, ವಿಜ್ಞಾನ ಮತ್ತು ಕ್ರೀಡಾ ಕ್ಷೇತ್ರದ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು, ಸುಶಾಂತ್ ಸಿಂಗ್  ಕುಟಂಬದ ಹೆಮ್ಮೆ ಹಾಗೂ ಸ್ಪೂರ್ತಿಯಾಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com