ಕೊರೋನಾವೈರಸ್ ಎಫೆಕ್ಟ್: ಬಾಲಿವುಡ್ ಗೆ ಭಾರೀ ಹೊಡೆತ, ಎಷ್ಟು ಕೋಟಿ ನಷ್ಟ ಗೊತ್ತಾ?

ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಎಫೆಕ್ಟ್ ನಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ದುಬಾರಿ ವೆಚ್ಚದ ಚಿತ್ರಗಳ ಬಿಡುಗಡೆ ಅನಿರ್ದಿಷ್ಠಾವಧಿಗೆ ಮುಂದೂಡಲ್ಪಟ್ಟಿದ್ದು, ಬಾಲಿವುಡ್ ಗೆ ಭಾರೀ ಹೊಡೆತ ಬಿದ್ದಿದೆ
ಬಾಲಿವುಡ್ ಚಿತ್ರಗಳ ಪೋಸ್ಟರ್
ಬಾಲಿವುಡ್ ಚಿತ್ರಗಳ ಪೋಸ್ಟರ್

ಮುಂಬೈ: ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಎಫೆಕ್ಟ್ ನಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ದುಬಾರಿ ವೆಚ್ಚದ ಚಿತ್ರಗಳ ಬಿಡುಗಡೆ ಅನಿರ್ದಿಷ್ಠಾವಧಿಗೆ ಮುಂದೂಡಲ್ಪಟ್ಟಿದ್ದು, ಬಾಲಿವುಡ್ ಗೆ ಭಾರೀ ಹೊಡೆತ ಬಿದ್ದಿದೆ. ಬಾಲಿವುಡ್ ಇಂಡಸ್ಟ್ರೀ ಒಳಗಿರುವವರು ಹೇಳುವಂತೆ  ಏನಿಲ್ಲಾವೆಂದರೂ ಸುಮಾರು 300 ರಿಂದ 800 ಕೋಟಿಯಷ್ಟು ನಷ್ಟ ಉಂಟಾಗಿದೆ.

ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ ಪ್ರಕಾರ 500 ರಿಂದ 800 ಕೋಟಿ ನಷ್ಟವಾಗಿದೆ. ಮತ್ತೊಬ್ಬರು ಹೇಳುವಂತೆ  ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಾಲಿವುಡ್ ಇಂಡಸ್ಟ್ರಿಗೆ 350 ಕೋಟಿ ನಷ್ಟ ಉಂಟಾಗಿದೆ. ಇತರರ ಕೂಡಾ ಆಗಿರುವ ನಷ್ಟದ ಅಂಕಿ ಅಂಶವನ್ನು ಹೇಳಲು ಚಡಪಡಿಸುತ್ತಿರುವಂತೆ  ಹಿಂದಿ ಚಿತ್ರರಂಗ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. 

ಚಿತ್ರರಂಗ ಮಾತ್ರವಲ್ಲ, ಎಲ್ಲರಿಗೂ ಇದು ಅತ್ಯಂತ ಕೆಟ್ಟ ಸಮಯ.ವ್ಯವಹಾರಕ್ಕೆ ಅಡ್ಡಿಯಾಗುತ್ತಿದೆ. ಪರಿಸ್ಥಿತಿ ಯಾವಾಗ ಸಾಮಾನ್ಯವಾಗಲಿದೆ ಎಂಬುದು ತಿಳಿದಿಲ್ಲವಾದ್ದರಿಂದ ಮುಂಚಿತವಾಗಿ ಅಂಕಿಅಂಶ ಲೆಕ್ಕ ಸರಿಯಾಗಿ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಟಿ- ಸಿರೀಸ್ ಸಂಸ್ಥೆ ಮುಖ್ಯಸ್ಥ ಭೂಷಣ್ ಕುಮಾರ್

ಕೊರೋನಾಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಿರ್ಬಂಧ ಏಪ್ರಿಲ್ 15ರವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ನಂತರ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಇತ್ತೀಚಿಗೆ ಶುಭ್ ಮಂಗಳ್ ಜ್ಯಾದಾ ಸವದಾನ್ ಚಿತ್ರ ಬೆಂಬಲಿಸಿದ್ದ ನಿರ್ಮಾಪಕರೊಬ್ಬರು ಹೇಳುತ್ತಾರೆ. 

35 ವರ್ಷದ ವೃತ್ತಿ ಜೀವನದಲ್ಲಿ ಈ ರೀತಿಯ ಬಿಕ್ಕಟ್ಟನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ.  31ಕ್ಕೆ ಇದು ಕೊನೆಗೊಳ್ಳಲಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅಂದೇ ಎಲ್ಲಾ ಕೊನೆಯಾಗಿ ಸಾಮಾನ್ಯ ಪರಿಸ್ಥಿತಿಗೆ ಬರಲಿದೆ ಎಂಬುದನ್ನು ಹೇಗೆ  ನಂಬುವುದು? ದಿನದ ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ . ಅಂತವರಿಗೆ ಸಹಾಯ ಮಾಡಬೇಕಾಗಿದೆ ಎಂದು ಚಮೇಲಿಯಂತಹ ಚಿತ್ರ ನಿರ್ಮಿಸಿದ ನಿರ್ಮಾಪಕ ಸುಧೀರ್ ಮಿಶ್ರಾ ಪರಿಸ್ಥಿತಿಯನ್ನು ವಿವರಿಸಿದ್ದಾರೆ. 

ದಿನದ ವೇತನ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರಿಗೆ ಭಾರತೀಯ ನಿರ್ಮಾಪಕರ ಒಕ್ಕೂಟ ಪರಿಹಾರ ನಿಧಿಯನ್ನು ಸ್ಥಾಪಿಸಬೇಕೆಂದು ಮಿಶ್ರಾ, ಅನುರಾಗ್ ಕಶ್ಯಪ್, ಅನುಭವ್ ಸಿನ್ಹಾ ಮೊದಲಾದವರು ಸಲಹೆ ನೀಡಿದ್ದಾರೆ. 

ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಗಳಿಕೆಯಾಗುತಿತ್ತು. ಆದರೆ, ಈ  ಬಾರಿ ಕೆಟ್ಟ ಪರಿಸ್ಥಿತಿಯಿಂದ ಸಾಕಷ್ಟು ನಷ್ಟ ಉಂಟಾಗಿದೆ.  ಭಾಘಿ 3 ಚಿತ್ರಕ್ಕೆ 30 ಕೋಟಿ ನಷ್ಟ ಉಂಟಾಗಿದ್ದರೆ ಅಂಗ್ರೇಜಿ ಮೀಡಿಯಾಂಗೆ 25 ರಿಂದ 30 ಕೋಟಿ ನಷ್ಟ ಉಂಟಾಗಿದೆ. 

ನಷ್ಟದ ಕಾರಣದಿಂದಾಗಿ ಸೂರ್ಯವಂಶಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಒಟ್ಟಾರೇ, ಮೊದಲ ತ್ರೈಮಾಸಿಕ ಅವಧಿಯಲ್ಲಿ ಸುಮಾರು 350 ಕೋಟಿಯಷ್ಟು ನಷ್ಟ ಉಂಟಾಗಿದೆ. ಸ್ಟ್ರೀಟ್ ಡ್ಯಾನ್ಸರ್ 3ಡಿ, ಲವ್ ಅಜ್ ಕಲ್ , ಶುಭ್ ಮಂಗಳ್ ಜ್ಯಾದಾ ಸವಧಾನ್ ಚಿತ್ರಗಳು ಕೂಡಾ ಉತ್ತಮ ಗಳಿಕೆ ಕಂಡಿಲ್ಲ ಎಂದು ಬಾಲಿವುಡ್  ಉದ್ಯಮದೊಳಗಿರುವವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com