ಕೊರೋನಾ ಕಂಟಕ: ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಅನುಪಮ್ ಖೇರ್,ಶಬನಾ ಅಜ್ಮಿ

ಪ್ರಮುಖ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಸ್ವಯಂ - ನಿರ್ಬಂಧದಲ್ಲಿದ್ದಾರೆ. ಬುಡಾಪೆಸ್ಟ್ ನಿಂದ ಇತ್ತೀಚೆಗೆ ಹಿಂದಿರುಗಿದ ಅವರು, ದೇಶದಲ್ಲಿ ಕೋವಿಡ್ -೧೯ (ಕರೋನಾ ವೈರಸ್) ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

ನಾನು ಮಾರ್ಚ್ ೧೫ ರ ಬೆಳಗ್ಗೆ ಬುಡಾಪೆಸ್ಟ್ ನಿಂದ ಭಾರತಕ್ಕೆ ಮರಳಿ ಬಂದಿದ್ದು, ಮಾರ್ಚ್ ೩೦ ರವರೆಗೆ ಸೆಲ್ಪ್ ?ಐಸೋಲೇಷನ್ ನಲ್ಲಿ ಇರಲು ನಿರ್ಧರಿಸಿದ್ದೇನೆ ಎಂದು ಶಬನಾ ಅಜ್ಮಿ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಕರೋನಾ ವೈರಸ್ ಭಯದಿಂದ ಜಗತ್ತು ತಲ್ಲಣಗೊಂಡಿದೆ. ವೈರಸ್ ಹರಡದಂತೆ ಸರ್ಕಾರಗಳು ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ. ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಜ್ಞರು ನಿರಂತರವಾಗಿ ಸಲಹೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಲವು ಸೆಲೆಬ್ರೆಟಿಗಳು ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ತಮ್ಮ ಪ್ರಯಾಣದ ವಿವರಗಳನ್ನು ಗೌಪ್ಯವಾಗಿಡುವ ಮೂಲಕ ಅಪಾಯದ ತೀವ್ರತೆಯನ್ನು ಹೆಚ್ಚಿಸುತ್ತಿದ್ದಾರೆ. 

ಸ್ವಯಂ ನಿರ್ಬಂಧದಲ್ಲಿ ಅನುಪಮ್ ಖೇರ್ 

ಶುಕ್ರವಾರ ಅಮೆರಿಕದಿಂದ ಮರಳಿದ ಹಿರಿಯ ನಟ ಅನುಪಮ್ ಖೇರ್, ಮುನ್ನೆಚ್ಚರಿಕೆ ಕ್ರಮವಾಗಿ  ತನ್ನನ್ನು ತಾನು ಪ್ರತ್ಯೇಕಿಸಿಕೊಂಡು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. 

ಭಾರತಕ್ಕೆ ಬಂದ ನಂತರ ಕೊರೋನಾವೈರಸ್ ಪರೀಕ್ಷೆ ಮಾಡಿಸಿದೆ. ಅದು ಋಣಾತ್ಮಕವಾಗಿ ವರದಿ ಬಂದಿದೆ. ಎಂದು ನಟ ಹೇಳೀದ್ದಾರೆ."ನಾನೀಗ ಭಾರತದಲ್ಲಿದ್ದೇನೆ, . ನನ್ನನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಯಿತು ಮತ್ತು ನನಗೆ ಕ್ಲೀನ್ ಚಿಟ್ ನೀಡಲಾಯಿತು. ಆದರೆ ನಾನು ಮನೆಯಲ್ಲಿಯೇ ಇರುತ್ತೇನೆ. ನಾನು ಸ್ವಯಂ-ಪ್ರತ್ಯೇಕತೆಗೆ ಹೋಗುವವನಿದ್ದೇನೆ. , ”ಎಂದು ಖೇರ್ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದರು.

ಕರೋನಾ ಸಾಂಕ್ರಾಮಿಕದಿಂದ ವಿಶ್ವಾದ್ಯಂತ ೧೦ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿನ ಅಂಕಿಅಂಶಗಳಂತೆ ಜಗತ್ತಿನಾದ್ಯಂತ ೨.೫ ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com