ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ತಂಗಿದ್ದ ಹೋಟೆಲ್ ನಲ್ಲಿ ಕೊರೋನಾ ಸೋಂಕಿತ ಕನಿಕಾ ಕಪೂರ್!

ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ತಂಗಿದ್ದ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕೊರೋನಾ ವೈರಸ್ ಸೋಂಕಿತ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ತಂಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

Published: 23rd March 2020 12:47 PM  |   Last Updated: 23rd March 2020 12:47 PM   |  A+A-


kannika-1

ಕನಿಕಾ ಕಪೂರ್ - ದಕ್ಷಿಣ ಆಫ್ರಿಕಾ ತಂಡ

Posted By : Lingaraj Badiger
Source : IANS

ಲಖನೌ: ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ತಂಗಿದ್ದ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕೊರೋನಾ ವೈರಸ್ ಸೋಂಕಿತ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ತಂಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಏಕ ದಿನ ಸರಣಿಗಾಗಿ ಲಖನೌಗೆ ಆಗಮಿಸಿತ್ತು. ಆದರೆ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈ ಏಕ ದಿನ ಸರಣಿಯನ್ನು ಮುಂದೂಡಲಾಗಿದೆ.

ಹೋಟೆಲ್ ನಲ್ಲಿದ್ದ ಕನಿಕಾ ಕಪೂರ್ ಬಫೆಟ್ ಅನ್ನು ನಿರಾಕರಿಸಿದ್ದರು ಮತ್ತು ಹೋಟೆಲ್ ನಲ್ಲಿಯೇ ಹಲವು ಜನರನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಹೋಟೆಲ್ ನಲ್ಲಿದ್ದ ಸಂದರ್ಭದಲ್ಲಿ ಕನಿಕಾ ಸಹ ಹೋಟೆಲ್ ನಲ್ಲೇ ಇದ್ದರು. ಈ ಹೋಟೆಲ್ ನಲ್ಲಿ ನಡೆದ ಸುದ್ದಿ ವಾಹಿನಿಯೊಂದರ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಕನಿಕಾ ಆಗಮಿಸಿದ್ದರು. ಹೀಗಾಗಿ ಅವರು ಯಾರನ್ನು ಭೇಟಿ ಮಾಡಿದ್ದರು ಎಂಬುದರ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಗಾಯಕಿಯ ಸಂಪರ್ಕದಲ್ಲಿದ್ದ ಎಲ್ಲರನ್ನೂ ವೈದ್ಯಕೀಯ ತಾಪಸಣೆಗೆ ಒಳಪಡಿಸಬೇಕಿದೆ.

Stay up to date on all the latest ಬಾಲಿವುಡ್ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp