ಮನೆಕೆಲಸದಲ್ಲಿ ಬ್ಯುಸಿಯಾದ ಕತ್ರಿನಾ! ತಟ್ಟೆ ತೊಳೆದ ನಂತರ ಏನು ಮಾಡಿದ್ರು ಗೊತ್ತಾ?
ಕೊರೋನಾವೈರಸ್ ಭೀತಿಯ ಕಾರಣ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮನೆ ಕೆಲಸದವರು ಬರುತ್ತಿಲ್ಲ. ಇದರಿಂದಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೀಗ ತಾವೇ ಮನೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
Published: 26th March 2020 09:43 AM | Last Updated: 26th March 2020 09:53 AM | A+A A-

ಕತ್ರಿನಾ ಕೈಫ್
ಮುಂಬೈ: ಕೊರೋನಾವೈರಸ್ ಭೀತಿಯ ಕಾರಣ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮನೆ ಕೆಲಸದವರು ಬರುತ್ತಿಲ್ಲ. ಇದರಿಂದಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇದೀಗ ತಾವೇ ಮನೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮನೆಯಲಿರುವ ಸಮಯವನ್ನು ಉಪಯೋಗಪಡಿಸಿಕೊಳ್ಳುತ್ತಿರುವ ಕತ್ರಿನಾ ಕೈಫ್, ಪಾತ್ರೆ ತೊಳೆಯುವ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಇದೀಗ ಮನೆ ಸ್ವಚ್ಛಗೊಳಿಸುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಕೈಯಲ್ಲಿ ಪೊರಕೆಯನ್ನು ಹಿಡಿದು ನೆಲವನ್ನು ಸ್ವಚ್ಚಗೊಳಿಸುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.ಪೊರಕೆಯನ್ನು ಬ್ಯಾಟ್ ರೀತಿಯಲ್ಲಿ ಹಿಡಿದು ಪೋಸ್ ನೀಡುವ ಕತ್ರಿನಾ, ನಂತರ ನೆಲವನ್ನು ಸ್ವಚ್ಛಗೊಳಿಸುವ ದೃಶ್ಯ ಈ ವಿಡಿಯೋದಲ್ಲಿದೆ.
ಮೊನ್ನೆದಿನ ಮನೆಯಲ್ಲಿನ ಪಾತ್ರೆಗಳನ್ನು ತೊಳೆಯುವ ವಿಡಿಯೋವನ್ನು ಕತ್ರಿನಾ ಹಂಚಿಕೊಂಡಿದ್ದರು.