ರಿಷಿ ಕಪೂರ್ ನಿಧನ ಬಳಿಕ ವೈರಲ್ ಆದ ವಿಡಿಯೊ, ಯಾವುದದು, ಯುವಕ ಯಾರು?

ಬಾಲಿವುಡ್ ದಂತಕಥೆ ರಿಷಿ ಕಪೂರ್ ಮರಣ ಹೊಂದಿದ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೊ ಭಾರೀ ವೈರಲ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರಿಷಿ ಕಪೂರ್ ಅವರ ನಟನೆಯ 'ದೀವಾನ' ಚಿತ್ರದ ಹಾಡನ್ನು ಯುವಕನೊಬ್ಬ ಹಾಡುತ್ತಿದ್ದಾರೆ. ಅದನ್ನು ಆಲಿಸಿ ಭಾವಪರವಶರಾಗಿ ರಿಷಿ ಕಪೂರ್ ಯುವಕನಿಗೆ ಹರಸುತ್ತಾರೆ.
ಯುವಕ ಧೀರಜ್ ಮಾಡಿದ ವಿಡಿಯೊ
ಯುವಕ ಧೀರಜ್ ಮಾಡಿದ ವಿಡಿಯೊ

ನವದೆಹಲಿ: ಬಾಲಿವುಡ್ ದಂತಕಥೆ ರಿಷಿ ಕಪೂರ್ ಮರಣ ಹೊಂದಿದ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೊ ಭಾರೀ ವೈರಲ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರಿಷಿ ಕಪೂರ್ ಅವರ ನಟನೆಯ 'ದೀವಾನ' ಚಿತ್ರದ ಹಾಡನ್ನು ಯುವಕನೊಬ್ಬ ಹಾಡುತ್ತಿದ್ದಾರೆ. ಅದನ್ನು ಆಲಿಸಿ ಭಾವಪರವಶರಾಗಿ ರಿಷಿ ಕಪೂರ್ ಯುವಕನಿಗೆ ಹರಸುತ್ತಾರೆ.

ರಿಷಿ ಕಪೂರ್ ಅವರು ಮರಣ ಹೊಂದುವುದಕ್ಕೆ ಹಿಂದಿನ ದಿನ ರಾತ್ರಿ ತೆಗೆದ ವಿಡಿಯೊ ಇದು ಎಂದು ಸುದ್ದಿಯಾಗಿ ಹಲವರು ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದರ ಅಸಲಿಯತ್ತು ಬೇರೆ ಇದೆ.

ಇದು ರಿಷಿ ಕಪೂರ್ ಅವರು ಕಳೆದ ಫೆಬ್ರವರಿ 2ರಂದು ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತೆಗೆದ ವಿಡಿಯೊ. ಧೀರಜ್ ಕುಮಾರ್ ಸನು ಎಂಬ 21 ವರ್ಷದ ಯುವಕ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹಿರಿಯ ನಟನ ಮುಂದೆ ಹಾಡುವ ಅವಕಾಶ ಸಿಕ್ಕಿದಾಗ ಹಾಡಿ ಅದನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು.

12ನೇ ತರಗತಿ ಮುಗಿಸಿದ ನಂತರ ಗಾಯಕನಾಗಬೇಕೆಂಬ ಬಯಕೆ ಧೀರಜ್ ಗೆ ಇತ್ತಂತೆ. ತನ್ನ ಆಸೆಯಂತೆ  ಬಾಲಿವುಡ್ ದಂತಕಥೆ ತಮ್ಮ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿಕೊಂಡಿದ್ದರು. ರಿಷಿ ಕಪೂರ್ ಅವರು ನಿನ್ನೆ ತೀರಿಹೋದ ಬಳಿಕ ಯುವಕನ ಈ ಯೂಟ್ಯೂಬ್ ಚಾನೆಲ್ ನ ವಿಡಿಯೊಗೆ ಸಿಕ್ಕಾಪಟ್ಟೆ ಹಿಟ್ ಸಿಕ್ಕಿದೆ.

ಹಿಂದಿ ಚಿತ್ರೋದ್ಯಮದ ಪ್ರಖ್ಯಾತ ಕಪೂರ್ ಮನೆತನದ ಕಲಾವಿದ ರಿಷಿ ಕಪೂರ್ ನಿಧನಕ್ಕೆ ಇಡೀ ಚಿತ್ರರಂಗ ನೊಂದಿದೆ. ಅವರ ಕುಟುಂಬಸ್ಥರು, ಬಂಧುಗಳು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕ್ಯಾನ್ಸರ್ ರೋಗದಿಂದ ಸುಮಾರು ಎರಡು ವರ್ಷಗಳ ಕಾಲ ಬಳಲಿ ನಿನ್ನೆ ಬೆಳಗ್ಗೆ 8.45ಕ್ಕೆ ರಿಷಿ ಕಪೂರ್ ಮುಂಬೈಯ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಿನ್ನೆ ಸಂಜೆ ಮುಂಬೈಯ ಚಂದನ್ ವಾಡಿ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com