ಕಳೆದುಕೊಂಡಿಲ್ಲ, ಗಳಿಸಿಕೊಂಡಿದ್ದೇನೆ: ಇರ್ಫಾನ್ ಖಾನ್ ಬಗ್ಗೆ ಪತ್ನಿ ಸುತಾಪ ಸಿಕ್ದಾರ್

ಬಾಲಿವುಡ್ ನ ಕ್ರಿಯಾಶೀಲ ನಟ ಇರ್ಫಾನ್ ಖಾನ್ ತೀರಿಕೊಂಡ ನಂತರ ಅವರ ಪತ್ನಿ ಸುತಾಪ ಸಿಕ್ದರ್ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಇರ್ಫಾನ್ ಖಾನ್ ಮತ್ತು ಪತ್ನಿ ಸುತಾಪ ಸಿಕ್ದರ್(ಸಂಗ್ರಹ ಚಿತ್ರ)
ಇರ್ಫಾನ್ ಖಾನ್ ಮತ್ತು ಪತ್ನಿ ಸುತಾಪ ಸಿಕ್ದರ್(ಸಂಗ್ರಹ ಚಿತ್ರ)

ಮುಂಬೈ: ಬಾಲಿವುಡ್ ನ ಕ್ರಿಯಾಶೀಲ ನಟ ಇರ್ಫಾನ್ ಖಾನ್ ತೀರಿಕೊಂಡ ನಂತರ ಅವರ ಪತ್ನಿ ಸುತಾಪ ಸಿಕ್ದರ್ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

ಅಪರೂಪದ ಕ್ಯಾನ್ಸರ್ ರೋಗದಿಂದ 2 ವರ್ಷಕ್ಕೂ ಹೆಚ್ಚು ಕಾಲ ಹೋರಾಡಿ 54 ವರ್ಷದ ನಟ ಇರ್ಫಾನ್ ಖಾನ್ ಕಳೆದ ಬುಧವಾರ ಇಹಲೋಕ ತ್ಯಜಿಸಿದ್ದರು. ಇರ್ಫಾನ್ ಪತ್ನಿ ಸುತಾಪಾ ಮತ್ತು ಇಬ್ಬರು ಪುತ್ರರಾದ ಬಬಿಲ್ ಮತ್ತು ಅಯಾನ್ ಅವರನ್ನು ಅಗಲಿದ್ದಾರೆ.

ಸುತಾಪಾ ಫೇಸ್ ಬುಕ್ ನಲ್ಲಿ ಫೋಟೋವೊಂದನ್ನು ಷೇರ್ ಮಾಡಿದ್ದು ಅದರಲ್ಲಿ ತಮ್ಮ ತೋಳುಗಳನ್ನು ಇರ್ಫಾನ್ ಅವರ ಸುತ್ತ ಬಳಸಿ ಇಬ್ಬರೂ ಕ್ಯಾಮರಾ ನೋಡಿ ನಗುತ್ತಿದ್ದಾರೆ. ಈ ಫೋಟೋಗೆ ನಾನು ಏನೂ ಕಳೆದುಕೊಂಡಿಲ್ಲ, ಸಾಧ್ಯವಾದದ್ದನ್ನೆಲ್ಲಾ ಪ್ರತಿಯೊಂದು ಗಳಿಗೆಯಲ್ಲಿ ಜೀವನದಲ್ಲಿ ಪಡೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ.

ಇರ್ಫಾನ್ ಪುತ್ರ ಬಬಿಲ್ ಸಹ ಇನ್ಸ್ಟಾಗ್ರಾಂನಲ್ಲಿ, ತಂದೆಯ ಸಾವಿನ ನಂತರ ಜಗತ್ತಿನ ಮೂಲೆ ಮೂಲೆಗಳಿಂದ ಗೌರವ ಸಂತಾಪಗಳು ಬರುತ್ತಿದ್ದು ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಸಂದರ್ಭದಲ್ಲಿ ನನ್ನ ತಂದೆ ಮೇಲೆ, ನಮ್ಮ ಕುಟುಂಬದ ಮೇಲೆ ತೋರಿಸುತ್ತಿರುವ ಗೌರವ, ಪ್ರೀತಿಗೆ ಹೇಗೆ ಉತ್ತರಿಸಬೇಕೆಂದು ತಿಳಿಯುತ್ತಿಲ್ಲ. ಸ್ವಲ್ಪ ದಿನ ಕಳೆದ ಮೇಲೆ ನಿಮ್ಮೆಲ್ಲರಿಗೂ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com