ರಿಷಿ ಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮವಾದ ಪತಿಯಾಗಿದ್ದರು: ನೀತುಸಿಂಗ್

ರಿಷಿಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮ ಪತಿಯಾಗಿದ್ದರು, ಅವರೊಬ್ಬ ಅತ್ಯುತ್ತಮ ಸಂಗಾತಿಯಾಗಿದ್ದರು ಎಂದು ದಶಕಗಳ ಕಾಲ ಅವರೊಂದಿಗೆ ಸಂಸಾರ ನಡೆಸಿದ ಪತ್ನಿ ನೀತು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

Published: 01st May 2020 12:26 PM  |   Last Updated: 01st May 2020 12:26 PM   |  A+A-


Rishi kapoor and neethu singh

ರಿಷಿ ಕಪೂರ್ ಮತ್ತು ನೀತು ಸಿಂಗ್

Posted By : Shilpa D
Source : PTI

ನವದೆಹಲಿ: ನಿನ್ನೆಯಷ್ಟೇ ನಿಧನರಾದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಬಗ್ಗೆ ಪತ್ನಿ ನೀತು ಸಿಂಗ್ ಗುಣಗಾನ ಮಾಡಿದ್ದಾರೆ.

ರಿಷಿಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮ ಪತಿಯಾಗಿದ್ದರು, ಅವರೊಬ್ಬ ಅತ್ಯುತ್ತಮ ಸಂಗಾತಿಯಾಗಿದ್ದರು ಎಂದು ದಶಕಗಳ ಕಾಲ ಅವರೊಂದಿಗೆ ಸಂಸಾರ ನಡೆಸಿದ ಪತ್ನಿ ನೀತು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

67 ವರ್ಷದ ರಿಷಿ ಕಪೂರ್ ನಿನ್ನೆ ಬೆಳಗ್ಗೆ ಮುಂಬಯಿಯಲ್ಲಿ ನಿಧನರಾಗಿದ್ದರು. ಸುಮಾರು 2 ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು.

ಕಭೀ ಕಭಿ, ಅಮರ್ ಅಕ್ಬರ್ ಅಂಥೋನಿ  ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಈ ಜೋಡಿ 1980 ರಲ್ಲಿ ವಿವಾಹವಾಗಿತ್ತು.

ಕುಲ್ಲಂ ಕುಲ್ಲಾ ಎಂಬ ರಿಷಿ ಕಪೂರ್ ಆತ್ಮ ಚರಿತ್ರೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ, ರಿಷಿ ಕಪೂರ್ ಒಬ್ಬ ಬಾಯ್ ಫ್ರೆಂಡ್ ಗಿಂತ ಒಬ್ಬ ಉತ್ತಮ ಪತಿಯಾಗಿದ್ದರು. ನಾನು ಬಯಸಿದಂತ ಪತಿ ಅವರಾಗಿದ್ದರು ಎಂದು ನೀತು ಸಿಂಗ್ ತಾವು 2017 ರಲ್ಲಿ ಬರೆದ ಪುಸ್ತಕದಲ್ಲಿ ಹೇಳಿದ್ದಾರೆ.

Stay up to date on all the latest ಬಾಲಿವುಡ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp