ಸಲ್ಮಾನ್ ಖಾನ್ ಹಾಡಿರುವ 'ತೆರೆ ಬೀನಾ' ವಿಡಿಯೋ ಸಾಂಗ್ ಬಿಡುಗಡೆ: ಜಾಕ್ವೆಲಿನ್ ಜೊತೆ ಮಸ್ತ್ ರೋಮ್ಯಾನ್ಸ್!

ಲಾಕ್ ಡೌನ್ ಸಮಯದಲ್ಲಿ ಕಿರು ವಿಡಿಯೋ ಕ್ಲಿಪ್ ಗಳ ಮೂಲಕ ಪ್ರೇಕ್ಷಕರನ್ನು ಕಿಚಾಯಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್  ಅವರ 'ತೆರೆ ಬೀನಾ' ರೋಮ್ಯಾಂಟಿಕ್ ವಿಡಿಯೋ ಟ್ರಾಕ್ ಇಂದು ಬಿಡುಗಡೆಯಾಗಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ಸಲ್ಮಾನ್ ಖಾನ್
ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ಸಲ್ಮಾನ್ ಖಾನ್

ಮುಂಬೈ: ಲಾಕ್ ಡೌನ್ ಸಮಯದಲ್ಲಿ ಕಿರು ವಿಡಿಯೋ ಕ್ಲಿಪ್ ಗಳ ಮೂಲಕ ಪ್ರೇಕ್ಷಕರನ್ನು ಕಿಚಾಯಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್  ಅವರ 'ತೆರೆ ಬೀನಾ' ರೋಮ್ಯಾಂಟಿಕ್ ವಿಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ.

ಈ ಹಾಡನ್ನು ಟ್ವಿಟರ್ ಖಾತೆಯಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳೊಂದಿಗೆ  ಹಂಚಿಕೊಂಡಿದ್ದಾರೆ.ನಾನೇ ಹಾಡಿ ಚಿತ್ರೀಕರಿಸಿರುವ ಹಾಡನ್ನು  ನಿಮ್ಮಗೊಸ್ಕರ ಪೋಸ್ಟ್ ಮಾಡುತ್ತಿದ್ದೀನಿ. ಶೇರ್, ಟ್ಯಾಗ್ ಮಾಡಿ ಎಂಜಯ್ ಮಾಡಿ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ನಾಲ್ಕು ನಿಮಿಷ 20 ಸೆಕೆಂಡ್ ಗಳ ವಿಡಿಯೋ ಸಾಂಗ್ ನ್ನು ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ನಲ್ಲಿ ಚಿತ್ರೀಕರಿಸಲಾಗಿದ್ದು, ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್  ಸಖತ್ ಎಂಜಾಯ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com