ಅಮಿತಾಬ್ ಬಚ್ಚನ್ ಅಭಿನಯದ 'ಗುಲಾಬೋ ಸಿತಾಬೋ' ಅಮೆಜಾನ್ ಪ್ರೈಮ್‌ನಲ್ಲಿ ಜೂನ್ 12ಕ್ಕೆ ಬಿಡುಗಡೆ!

ಕೊರೋನಾ ಮಹಾಮಾರಿ ಭಾರತೀಯ ಚಿತ್ರರಂಗವನ್ನು ಅದೋಗತಿಗೆ ತಂದಿಟ್ಟಿದೆ. ಹೌದು ಕಳೆದ ಎರಡು ತಿಂಗಳಿನಿಂದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಜೊತೆಗೆ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಇದರ ಮಧ್ಯೆ ಅದಾಗಲೇ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡೆಯಾಗಿವೆ. 
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ನವದೆಹಲಿ: ಕೊರೋನಾ ಮಹಾಮಾರಿ ಭಾರತೀಯ ಚಿತ್ರರಂಗವನ್ನು ಅದೋಗತಿಗೆ ತಂದಿಟ್ಟಿದೆ. ಹೌದು ಕಳೆದ ಎರಡು ತಿಂಗಳಿನಿಂದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಜೊತೆಗೆ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಇದರ ಮಧ್ಯೆ ಅದಾಗಲೇ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡೆಯಾಗಿವೆ. 

ಸದ್ಯದ ಮಟ್ಟಿಗೆ ಲಾಕ್ ಡೌನ್ ತೆರವು ಮಾಡಿ ಚಿತ್ರಮಂದಿರಗಳ ತೆರವಿಗೆ ಅವಕಾಶ ಕೊಟ್ಟರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಕೆಲ ನಿರ್ಮಾಪಕರು ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಚಿತ್ರವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. 

ಎ ರೈಸಿಂಗ್ ಸನ್ ಪ್ರೊಡೆಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಸೂಜಿತ್ ಸಿರ್ಕಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com