ಒಟಿಟಿ ವೇದಿಕೆಯಲ್ಲಿ ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಚಿತ್ರ ಬಿಡುಗಡೆ

ಬಾಲಿವುಡ್‌ನಲ್ಲಿ ಗಂಭೀರ ನಟನೆಗಾಗಿ ಹೆಸರುವಾಸಿ ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

Published: 15th May 2020 03:16 PM  |   Last Updated: 15th May 2020 03:40 PM   |  A+A-


Vidya Balan's Shakuntala Devi

ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಚಿತ್ರ

Posted By : Srinivasamurthy VN
Source : UNI

ಮುಂಬೈ: ಬಾಲಿವುಡ್‌ನಲ್ಲಿ ಗಂಭೀರ ನಟನೆಗಾಗಿ ಹೆಸರುವಾಸಿ ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಕೊರೊನಾ ವೈರಸ್‌ನಿಂದಾಗಿ ದೇಶವು ಲಾಕ್‌ಡೌನ್ ಆಗಿದೆ. ಈ ಅವಧಿಯಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ವಿದ್ಯಾ ಬಾಲನ್ ಅವರ ಚಿತ್ರ 'ಶಕುಂತಲಾ ದೇವಿ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.ವಿದ್ಯಾ ಅವರ ಚಿತ್ರ ಮೇ 8 ರಂದು ಬಿಡುಗಡೆಯಾಗಬೇಕಿತ್ತು ಆದರೆ  ಕೊರೊನಾ ವೈರಸ್‌ನದಿಂದಾಗಿ ಚಿತ್ರದ ಬಿಡುಗಡೆಯು ಸ್ಥಗಿತಗೊಂಡಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಈ ಮಾಹಿತಿಯನ್ನು ವಿದ್ಯಾ ನೀಡಿದ್ದಾರೆ, "ಶಕುಂತಲಾ ದೇವಿ ಶೀಘ್ರದಲ್ಲೇ ತನ್ನ ಕುಟುಂಬದೊಂದಿಗೆ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು ಎಂದು ಘೋಷಿಸಲು ಸಂತೋಷವಾಗಿದೆ. ಇಂತಹ ಊಹಿಸಲಾಗದ ಸಮಯದಲ್ಲಿ ನಾವು ನಿಮ್ಮನ್ನು ರಂಜಿಸಲು  ಸಮರ್ಥರಾಗಿದ್ದೇವೆ ಎಂದು ನಾನು ರೋಮಾಂಚನಗೊಂಡಿದ್ದೇನೆ. ಆದರೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ತಿಳಿಸಿದ್ದಾರೆ. 

ಶಂಕುತಲಾ ದೇವಿ ಖ್ಯಾತ ಗಣಿತಕಾರರು. ಶಕುಂತಲಾ ದೇವಿ ಅವರ ಜೀವನಚರಿತ್ರೆಯಾಗಿದ್ದು, ಅವರ ಅದ್ಭುತ ಪ್ರತಿಭೆಯಿಂದ ಜಗತ್ತು ಬೆರಗುಗೊಂಡಿದೆ. ಗಣಿತದ ಸಂಕೀರ್ಣ ಲೆಕ್ಕಾಚಾರಗಳನ್ನು ಅವರು ಕೆಲವು ಸೆಕೆಂಡುಗಳಲ್ಲಿ ಕರಗತ ಮಾಡಿಕೊಂಡಿದ್ದರು. ಚಿತ್ರವನ್ನು ಅನು ಮೆನನ್  ನಿರ್ದೇಶಿಸಿದ್ದಾರೆ.

Stay up to date on all the latest ಬಾಲಿವುಡ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp