ಡ್ರಗ್ಸ್ ಕೇಸ್: ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಸದ್ಯಕ್ಕೆ ಬಂಧನದಿಂದ ಪಾರು
ಬಾಲಿವುಡ್ ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ನವೆಂಬರ್ ಏಳರವರೆಗೂ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದೆ.
Published: 03rd November 2020 07:29 PM | Last Updated: 05th November 2020 01:52 PM | A+A A-

ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜೊತೆಗೆ ದೀಪಿಕಾ ಪಡುಕೋಣೆ
ಮುಂಬೈ: ಬಾಲಿವುಡ್ ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ನವೆಂಬರ್ ಏಳರವರೆಗೂ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದೆ.
ಎನ್ ಸಿಬಿ ಸಮನ್ಸ್ ನೀಡಿದ ನಂತರ ಬಂಧನ ಭೀತಿಯಲ್ಲಿ ಕರಿಷ್ಮಾ ಪ್ರಕಾಶ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.ಬಂಧನಕ್ಕೂ ಮುನ್ನ ಜಾಮೀನು ಅರ್ಜಿಗೆ ಕೇಂದ್ರ ತನಿಖಾ ದಳ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸಿತು. ವಿಚಾರಣೆ ವೇಳೆಯಲ್ಲಿ ಆಕೆಯ ಉಪಸ್ಥಿತಿ ಕೋರಿ ಅರ್ಜಿಯನ್ನು ಸಲ್ಲಿಸಿತು.
ಎನ್ ಸಿಬಿ ಕಚೇರಿಯಲ್ಲಿ ಉಪಸ್ಥಿತರಿದ್ದು, ವಿಚಾರಣೆಗೆ ಸಹಕರಿಸಲು ಆಕೆ ಸಿದ್ಧವಿರುವುದಾಗಿ ಪ್ರಕಾಶ್ ಪರ ವಕೀಲ ಅಹಾದ್ ಪಾಂಡಾ ಹೇಳಿದರು. ಎನ್ ಸಿಬಿ ಮುಂದಿನ ವಿಚಾರಣೆವರೆಗೂ ಬಂಧನದಂತಹ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಪ್ರಾಸಿಕ್ಯೂಸನ್ ಭರವಸೆ ನೀಡಿದರು. ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ನ್ಯಾಯಾಧೀಶ ಜಿ. ಬಿ. ಗುರಾವ್ ಮುಂದೂಡಿದರು.