ಪತ್ನಿ ಐಶ್ವರ್ಯಾಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ. ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿಸುವ ಕರ್ವಾಚೌತ್ ಕೂಡ ಒಂದು.

Published: 07th November 2020 04:03 PM  |   Last Updated: 07th November 2020 04:03 PM   |  A+A-


abhishek-aishu

ಅಭಿಷೇಕ್ ಬಚ್ಚನ್ - ಐಶ್ವರ್ಯಾ

Posted By : Lingaraj Badiger
Source : UNI

ಮುಂಬೈ: ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ. ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿಸುವ ಕರ್ವಾಚೌತ್ ಕೂಡ ಒಂದು.

ಈ ಬಾರಿ ಬಾಲಿವುಡ್ ನ ಹಲವು ನಟಿಯರು ಈ ವ್ರತವನ್ನು ಆಚರಿಸಿದ್ದಾರೆ. ವಿದೇಶದಲ್ಲಿರುವ ಪ್ರಿಯಾಂಕಾ ಚೋಪ್ರಾ ಸಹ ಪತಿ ನಿಕ್‌ ಜೋನ್ಸ್ ಗಾಗಿ ಕರ್ವಾಚೌತ್ ಆಚರಿಸಿದ್ದಾರೆ. ಪ್ರೀತಿ ಜಿಂಟಾ, ಇತ್ತೀಚೆಗೆ ಮದುವೆಯಾದ ನೇಹಾ ಕಕ್ಕರ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಮೊದಲಾದ ಸೆಲೆಬ್ರಿಟಿಗಳು ಕರ್ವಾ ಚೌತ್ ಆಚರಿಸಿದ್ದಾರೆ.

ಇದು ನಟಿಮಣಿಯರ ವಿಷಯವಾಯಿತು. ಆದರೆ ಪತ್ನಿಯ ಯೋಗಕ್ಷೇಮ ಕೋರಿ ಅಭಿಷೇಕ್ ಬಚ್ಚನ್ ಸಹ ಕರ್ವಾಚೌತ್ ವ್ರತ ಮಾಡಿ, ಉಪವಾಸವಿದ್ದುದು ಈ ಬಾರಿಯ ವಿಶೇಷ.

ಪತಿಗಾಗಿ ಬೆಳಗಿನಿಂದ ಉಪವಾಸವಿದ್ದು, ರಾತ್ರಿ ಚಂದ್ರನನ್ನು ಪತಿಯನ್ನು ಒಟ್ಟಿಗೆ ನೋಡಿ ಉಪವಾಸ ಬಿಡುವ ವ್ರತವೇ ಕರ್ವಾಚೌತ್. ಗುರುವಾರ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಆರೋಗ್ಯ, ಆಯುಷ್ಯ, ಏಳಿಗೆ ಬಯಸಿ ಉಪವಾಸ ಕೈಗೊಂಡಿದ್ದರು. ಅಂದು ಅಭಿಷೇಕ್ ಬಚ್ಚನ್ ಸಹ ಐಶ್ವರ್ಯಾ ರೈಗಾಗಿ ಉಪವಾಸವಿದ್ದು, ಪತ್ನಿ ಊಟ ಸೇವಿಸುವವರೆಗೂ ತಾವೂ ಸಹ ನಿರಾಹಾರಿಯಾಗಿದ್ದರಂತೆ.

'ಬಾಗಬಾನ್' ಸಿನಿಮಾದಲ್ಲಿ ಅಮಿತಾಭ್ ತಮ್ಮ ಪತ್ನಿಗಾಗಿ ಉಪವಾಸ ಆಚರಿಸುವ ದೃಶ್ಯವಿದೆ. ಈ ದೃಶ್ಯ ಹಲವರ ಮನಗೆದ್ದಿತ್ತು. ಅದರಿಂದಲೇ ಅಭಿಷೇಕ್ ಪ್ರೇರಣೆ ಪಡೆದಿದ್ದಾರೆ ಎಂಬ ಚರ್ಚೆಯೂ ಬಾಲಿವುಡ್ ನಲ್ಲಿ ಕೇಳಿಬಂದಿದೆ.

ಪ್ರೇರಣೆ ಯಾವುದೇ ಇರಲಿ. ಪತ್ನಿಯ ಏಳಿಗೆಗಾಗಿ ತಾನೂ ಸಹ ಉಪವಾಸ ಆಚರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು ಅವರಿಬ್ಬರ ನಡುವಿನ ಅನುಬಂಧಕ್ಕೆ ಸಾಕ್ಷಿಯಾಗಿದೆ.


Stay up to date on all the latest ಬಾಲಿವುಡ್ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp