ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಡ್ವಾಲಾ ಪತ್ನಿ ಬಂಧಿಸಿದ ಎನ್ ಸಿಬಿ, ಗಾಂಜಾ ವಶ!

ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ  ಅಧಿಕಾರಿಗಳು ಫಿರೋಜ್ ಪತ್ನಿಯನ್ನು ಬಂಧಿಸಿದ್ದಾರೆ.
ಫಿರೋಜ್ ನಾಡಿಯಾಡ್ವಾಲಾ
ಫಿರೋಜ್ ನಾಡಿಯಾಡ್ವಾಲಾ

ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ  ಅಧಿಕಾರಿಗಳು ಫಿರೋಜ್ ಪತ್ನಿಯನ್ನು ಬಂಧಿಸಿದ್ದಾರೆ. 

ಫಿರೋಜ್ ನಾಡಿಯಾಡ್ವಾಲಾ ಅವರ ಮನೆಯಿಂದ ಅಧಿಕಾರಿಗಳು ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ನಾಡಿಯಾಡ್ವಾಲಾ ಪತ್ನಿಯನ್ನು ಬಂಧಿಸಿದ್ದಾರೆ ಎಂದು ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.

ಫಿರೋಜ್ ನಾಡಿಯಾಡ್ವಾಲಾ ಅವರ ಪತ್ನಿ ಶಬಾನಾ ಸಯೀದ್ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಎನ್ ಸಿಬಿ ಅಧಿಕಾರಿಗಳು ಮಲಾಡ್, ಅಂಧೇರಿ, ಲೋಖಂಡ್ ವಾಲಾ, ಖಾರ್ಘರ್ ಮತ್ತು ಕೋಪರ್ ಖೈರಾಣೆಯಲ್ಲಿಯೂ ದಾಳಿ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com