ಬಾಲಿವುಡ್ ಡ್ರಗ್ ಕೇಸು: ನಟ ಅರ್ಜುನ್ ರಾಂಪಾಲ್ ಸ್ನೇಹಿತ ಪೌಲ್ ಬರ್ಟೆಲ್ ಬಂಧನ 

ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ ಕಂಟ್ರೋಲ್ ವಿಭಾಗ ಶುಕ್ರವಾರ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಸ್ನೇಹಿತ ಪೌಲ್ ಬರ್ಟೆಲ್ ರನ್ನು ಬಂಧಿಸಲಾಗಿದೆ.

Published: 13th November 2020 10:26 AM  |   Last Updated: 13th November 2020 10:32 AM   |  A+A-


Actor Arjun Rampal

ನಟ ಅರ್ಜುನ್ ರಾಂಪಾಲ್

Posted By : Sumana Upadhyaya
Source : ANI

ಮುಂಬೈ: ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ನಾರ್ಕೊಟಿಕ್ ಕಂಟ್ರೋಲ್ ವಿಭಾಗ ಶುಕ್ರವಾರ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಸ್ನೇಹಿತ ಪೌಲ್ ಬರ್ಟೆಲ್ ರನ್ನು ಬಂಧಿಸಲಾಗಿದೆ.

ಬಾಲಿವುಡ್ ನಲ್ಲಿ ಅಪಾರ ಪ್ರಮಾಣದಲ್ಲಿ ಹಲವರು ಡ್ರಗ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಿಕ್ಕಿ ನಟ ಅರ್ಜುನ್ ರಾಂಪಾಲ್ ನ ಮುಂಬೈಯಲ್ಲಿರುವ ನಿವಾಸ ಮತ್ತು ಕಚೇರಿ ಮೇಲೆ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ  ತಂಡ ಮೊನ್ನೆ 9ರಂದು ದಾಳಿ ನಡೆಸಿ ತೀವ್ರ ಶೋಧ ನಡೆಸಿತ್ತು.

ನಿನ್ನೆ ಅರ್ಜುನ್ ರಾಂಪಾಲ್ ಗೆಳತಿ ಗೇಬ್ರಿಯೆಲ್ಲಾ ಡೆಮೆಟ್ರಿಯಡ್ಸ್ ನಾರ್ಕೊಟಿಕ್ ವಿಭಾಗದ ಮುಂದೆ ಸತತ ಎರಡನೇ ದಿನ ವಿಚಾರಣೆಗೆ ಹಾಜರಾಗಿದ್ದರು. ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಇಂದು ಹಾಜರಾಗುವಂತೆ ಅರ್ಜುನ್ ರಾಂಪಾಲ್ ಗೂ ಆದೇಶ ಬಂದಿದೆ. 

ಮೊನ್ನೆ ಅವರ ನಿವಾಸದ ಮೇಲೆ ದಾಳಿ ಮಾಡಿದ್ದ ವೇಳೆ ಅಧಿಕಾರಿಗಳ ತಂಡ ಶೋಧ ನಡೆಸಿ ನಟ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಾದ ಲ್ಯಾಪ್ ಟಾಪ್, ಮೊಬೈಲ್ ಫೋನ್, ಟ್ಯಾಬ್ಲೆಟ್ಸ್ ಗಳನ್ನು ವಶಪಡಿಸಿಕೊಂಡಿದ್ದರು. ನಟನ ಚಾಲಕನನ್ನು ಕೂಡ ವಿಚಾರಣೆ ನಡೆಸಿದ್ದರು. 

ಕಳೆದ ತಿಂಗಳು ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಪುಣೆ ಜಿಲ್ಲೆಯ ಲೊನವಾಲಾದ ರೆಸಾರ್ಟ್ ವೊಂದರಿಂದ ಎನ್ ಸಿಬಿ ಅಧಿಕಾರಿಗಳ ತಂಡ ಗೇಬ್ರಿಯಲ್ ಸೋದರ ಅಗಿಸಿಲಾಸ್ ಡೆಮೆಟ್ರಿಯಡ್ಸ್ ನ್ನು ಬಂಧಿಸಿದ್ದರು. 

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎನ್ ಸಿಬಿ ಬಾಲಿವುಡ್ ನಲ್ಲಿ ಡ್ರಗ್ ಕೇಸಿನ ವಿಚಾರಣೆಯನ್ನು ತೀವ್ರವಾಗಿ ನಡೆಸುತ್ತಿದೆ. 


Stay up to date on all the latest ಬಾಲಿವುಡ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp