ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್, ಸೋದರಿ ರಂಗೋಲಿ ಚಂಡೆಲ್ ಗೆ ಮತ್ತೊಮ್ಮೆ ಪೊಲೀಸ್ ಸಮನ್ಸ್ ಜಾರಿ

ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ಅವರಿಗೆ ಮುಂಬೈ ಪೊಲೀಸ್ ಮೂರನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಇದೇ ತಿಂಗಳ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.
ಕಂಗನಾ ರಾನಾವತ್, ಸೋದರಿ ರಂಗೋಲಿ ಚಂಡೇಲ್
ಕಂಗನಾ ರಾನಾವತ್, ಸೋದರಿ ರಂಗೋಲಿ ಚಂಡೇಲ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ಅವರಿಗೆ ಮುಂಬೈ ಪೊಲೀಸ್ ಮೂರನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಇದೇ ತಿಂಗಳ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

ಇತ್ತೀಚೆಗೆ ಕಂಗನಾ ಮತ್ತು ಆಕೆಯ ಸೋದರಿ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಆಕ್ಷೇಪಾರ್ಹ ವಿಷಯಗಳನ್ನು ಬರೆದು ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟುಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಂಗನಾ ಮತ್ತು ಆಕೆಯ ಸೋದರಿ ಮೇಲೆ ದೂರು ನೀಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

ಕಳೆದ ಅಕ್ಟೋಬರ್ 26 ಮತ್ತು 27ರಂದು ಇಬ್ಬರಿಗೂ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತಾದರೂ ಕಾರಣ ನೆಪವೊಡ್ಡಿ ಸೋದರಿಯರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ನವೆಂಬರ್ 9 ಮತ್ತು 10ರಂದು ಹಾಜರಾಗಲು ಸೂಚಿಸಲಾಗಿತ್ತಾದರೂ ಆಗಲೂ ಸೋದರಿಯರು ಬಂದಿರಲಿಲ್ಲ. ಹೀಗಾಗಿ ಮೂರನೇ ಬಾರಿ ಸಮನ್ಸ್ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com