ನಟ ಅಕ್ಷಯ್ ಕುಮಾರ್ 500 ಕೋಟಿ ರು ಮಾನನಷ್ಟ ಮೊಕದ್ದಮೆಗೆ ಯೂಟ್ಯೂಬರ್ ರಶೀದ್ ಸಿದ್ಧಿಕಿ ವಿರೋಧ

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಅಕ್ಷಯ್ ಕುಮಾರ್ ಹೂಡಿರುವ 500 ಕೋಟಿ ರು ಮಾನನಷ್ಟ ಮೊಕದ್ದಮೆಗೆ ಯೂಟ್ಯೂಬರ್ ರಶೀದ್ ಸಿದ್ಧಕಿ ವಿರೋಧ ವ್ಯಕ್ತಪಡಿಸಿದ್ದಾರೆ.

Published: 21st November 2020 12:58 PM  |   Last Updated: 21st November 2020 01:00 PM   |  A+A-


Akshay kumar

ಅಕ್ಷಯ್ ಕುಮಾರ್

Posted By : Shilpa D
Source : PTI

ಮುಂಬಯಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಅಕ್ಷಯ್ ಕುಮಾರ್ ಹೂಡಿರುವ 500 ಕೋಟಿ ರು ಮಾನನಷ್ಟ ಮೊಕದ್ದಮೆಗೆ ಯೂಟ್ಯೂಬರ್ ರಶೀದ್ ಸಿದ್ಧಕಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ನೊಟೀಸ್ ಪಡೆಯುವಂತೆ ಆಗ್ರಹಿಸಿರುವ ಸಿದ್ದಕಿ, ನೊಟೀಸ್ ವಾಪಸ್ ಪಡೆಯದಿದ್ದರೇ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಿಹಾರದ ಯೂಟ್ಯೂಬರ್ ರಶೀದ್ ಸಿದ್ಧಿಖಿ ಎಂಬಾತ ತನ್ನ 'ಎಫ್‌ಎಫ್‌ ನ್ಯೂಸ್' ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಸುಶಾಂತ್ ಸಿಂಗ್ ಸಾವಿನ ಸುದ್ದಿಗಳನ್ನು ಬಿತ್ತರಿಸುತ್ತಿದ್ದ. ಈ ವೇಳೆ ಆರೋಪಿ ರಿಯಾ ಚಕ್ರವರ್ತಿ ಕೆನೆಡಾಗೆ ತಪ್ಪಿಸಿಕೊಳ್ಳಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ರಶೀದ್ ಸಿದ್ಧಿಖಿ ಪ್ರಕಟಿಸಿದ್ದ.

ಇದು ಅಕ್ಷಯ್ಕುಮಾರ್ ಗಮನಕ್ಕೆ ಬಂದಿದ್ದು, ಸುಳ್ಳು ಸುದ್ದಿ ಪ್ರಕಟಿಸಿದ ಯೂಟ್ಯೂಬರ್ ವಿರುದ್ಧ ಭಾರಿ 500ಕೋಟಿ ರು ಮಾನನಷ್ಟ ಮೊಕದ್ದಮೆಯನ್ನು ಅಕ್ಷಯ್ ಕುಮಾರ್ ಹೂಡಿದ್ದಾರೆ. 

ನಟ ಅಕ್ಷ್ ಕುಮಾರ್ ಉದ್ದೇಶ ಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ಮಂತ್ರಿಗಳನ್ನು ಪ್ರಕರಣದಲ್ಲಿ ಎಳದು ತಂದ ಹಿನ್ನೆಲೆಯಲ್ಲಿ ರಶೀದ್ ವಿರುದ್ಧ ಮುಂಬಯಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. 


 

Stay up to date on all the latest ಬಾಲಿವುಡ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp