ಆಶಿಕಿ ನಟ ರಾಹುಲ್ ರಾಯ್ ಗೆ ಬ್ರೈನ್ ಸ್ಟ್ರೋಕ್: ಐಸಿಯುಗೆ ದಾಖಲು

ಕಾರ್ಗಿಲ್‌ನಲ್ಲಿ ಸಿನಿಮಾ ಶೂಟಿಂಗ್‌ ಮಾಡುತ್ತಿದ್ದ ವೇಳೆ ಬಾಲಿವುಡ್‌ನ ಖ್ಯಾತ ನಟ ರಾಹುಲ್‌ ರಾಯ್‌ ಅವರಿಗೆ ಬ್ರೈನ್ ಸ್ಟ್ರೋಕ್‌ ಆಗಿದ್ದು, ಕೂಡಲೇ ಅವರನ್ನು ಅಲ್ಲಿಂದ ಶ್ರೀನಗರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ

Published: 30th November 2020 02:09 PM  |   Last Updated: 30th November 2020 02:09 PM   |  A+A-


Rahul roy

ರಾಹುಲ್ ರಾಯ್

Posted By : Shilpa D
Source : Online Desk

ಮುಂಬಯಿ: ಕಾರ್ಗಿಲ್‌ನಲ್ಲಿ ಸಿನಿಮಾ ಶೂಟಿಂಗ್‌ ಮಾಡುತ್ತಿದ್ದ ವೇಳೆ ಬಾಲಿವುಡ್‌ನ ಖ್ಯಾತ ನಟ ರಾಹುಲ್‌ ರಾಯ್‌ ಅವರಿಗೆ ಬ್ರೈನ್ ಸ್ಟ್ರೋಕ್‌ ಆಗಿದ್ದು, ಕೂಡಲೇ ಅವರನ್ನು ಅಲ್ಲಿಂದ ಶ್ರೀನಗರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಗಿಲ್‌ನಲ್ಲಿನ ತೀವ್ರ ಚಳಿ ವಾತಾವರಣದಿಂದಾಗಿ ರಾಹುಲ್‌ ರಾಯ್‌ ಅವರಿಗೆ ಬ್ರೈನ್ ಸ್ಟ್ರೋಕ್‌ ಆಗಿದೆ ಎಂದು ಹೇಳಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಇದಕ್ಕಾಗಿ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ

ನಿತಿನ್‌ ಗುಪ್ತಾ ನಿರ್ದೇಶನ ಮಾಡುತ್ತಿರುವ 'LAC: Live The Battle' ಸಿನಿಮಾದಲ್ಲಿ ರಾಹುಲ್‌ ರಾಯ್‌ ಅವರು ಸೇನಾಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. 1990ರಲ್ಲಿ ತೆರೆಕಂಡ 'ಆಶಿಕಿ' ಸಿನಿಮಾ ಮೂಲಕ ರಾಹುಲ್‌ ಬಣ್ಣದ ಲೋಕಕ್ಕೆ ನಟನಾಗಿ ಕಾಲಿಟ್ಟರು. ಮೊದಲ ಚಿತ್ರವೇ ಅವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತು. 
 

Stay up to date on all the latest ಬಾಲಿವುಡ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp