ಕೋವಿಡ್ ನಡುವೆ 'ಬಿಗ್ ಬಾಸ್' ಹೊಸ ಸೀಸನ್ ಶುರು, ಮನೆಯೊಳಗೆ ಪ್ರವೇಶಿಸಿದವರ ವಿವರ ಹೀಗಿದೆ

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ "ಬಿಗ್ ಬಾಸ್" ಹೊಸ ಸೀಸನ್ ಪ್ರಾರಂಭ ತುಸು ವಿಳಂಬವಾಗಿದೆ.
ಕೋವಿಡ್ ನಡುವೆ 'ಬಿಗ್ ಬಾಸ್' ಹೊಸ ಸೀಸನ್ ಶುರು, ಮನೆಯೊಳಗೆ ಪ್ರವೇಶಿಸಿದವರ ವಿವರ ಹೀಗಿದೆ

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ "ಬಿಗ್ ಬಾಸ್" ಹೊಸ ಸೀಸನ್ ಪ್ರಾರಂಭ ತುಸು ವಿಳಂಬವಾಗಿದೆ. ನಿನ್ನೆ ಶನಿವಾರದಿಂದ ಈ ಸಾಲಿನ ಶೋ ಪ್ರಾರಂಭವಾಗಿದ್ದು ಇನ್ನು ಪ್ರತಿದಿನ ವೀಕ್ಷಕರ ಮನರಂಜನೆಗೆ ಇದು ಪ್ರಥಮ ಆದ್ಯತೆಯಾಗಿರಲಿದೆ. 

ಬಾಲಿವುಡ್ ಸೂಪರ ಸ್ಟಾರ್ ಸಲ್ಮಾನ್ ಖಾನ್  14 ನೇ ಸೀಸನ್ ನ "ಬಿಗ್ ಬಾಸ್" 2020 ಕ್ಕೆ ಚಾಲನೆ ಕೊಟ್ಟಿದ್ದಾರೆ. ಕೋವಿಡ್ ಕಾರಣದಿಂದಾಗಿ ಖಾನ್, "ಈ ವರ್ಷ "ಸಕಾರಾತ್ಮಕತೆ" ಎಂಬ ಪದವೇ ಬಹಳ ನಕಾರಾತ್ಮಕ ಅರ್ಥದಿಂದ ಕೂಡಿದೆ" ಎಂದಿದ್ದಾರೆ.

"ಈ ಲಾಕ್‌ಡೌನ್ ಜನರು ಪಾತ್ರೆಗಳನ್ನು ತೊಳೆಯುವುದು, ನೆಲ ಒರೆಸುವುದು ಮುಖ್ಯವಾಗಿ ಹಿಂದಿನವರು ಹಾಕಿಕೊಟ್ಟ ಮಾರ್ಗವನ್ನು ಗೌರವಿಸಲು ನಮಗೆ ಕಲಿಸಿದೆ." ಎಂದರು. ಅಲ್ಲದೆ "ಅನೇಕ ಬಗೆಯ  ಮನೆಕೆಲಸಗಳನ್ನು ಕಲಿಯುವಂತೆ ಮಾಡಿದೆ" ಎಂದಿದ್ದಾರೆ. ಅವರು ಕಾರ್ಯಕ್ರಮದ ಉದ್ಘಾಟನಾ ಶೋನಲ್ಲಿ ಮಾತನಾಡಿದ್ದರು.

ಈ ಸಾಲಿನಲ್ಲಿ ಮನೆಯೊಳಗೆ ಪ್ರವೇಶಿಸಿದ ಸ್ಪರ್ಧಿಗಳ ವಿವರ ಹೀಗಿದೆ-
ಟಿವಿ ಕಪಲ್ ಗಳಾದ ರುಬಿನಾ ಡಿಲೈಕ್ ಮತ್ತು ಅಭಿನವ್ ಶುಕ್ಲಾ, ನಟರಾದ ಐಜಾಜ್ ಖಾನ್, ಜಾಸ್ಮಿನ್ ಭಸಿನ್, ನಿಶಾಂತ್ ಸಿಂಗ್ ಮಲ್ಖಾನಿ, ಪವಿತ್ರ ಪುನಿಯಾ,  ಗಾಯಕ  ರಾಹುಲ್ ವೈದ್ಯ, ಹಿರಿಯ ಗಾಯಕ ಕುಮಾರ್ ಸಾನು ಅವರ ಪುತ್ರ ಜಾನ್ ಕುಮಾರ್, ಮಾಡೆಲ್, ಗಾಯಕಿ-ರೂಪದರ್ಶಿ ಸಾರಾ ಗುರ್ಪಾಲ್ ಮತ್ತು ದಕ್ಷಿಣ ಭಾರತದ ನಟ ನಿಕ್ಕಿ ಟಂಬೋಲಿ

ಸಾಂಕ್ರಾಮಿಕ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು 54 ವರ್ಷದ ಸಲ್ಮಾನ್ ಈ ಬಾರಿ ಸೆಟ್‌ಗಳಲ್ಲಿ ನೇರ ಪ್ರೇಕ್ಷಕರು ಇರದಂತೆ ಜಾಗೃತಿ ವಹಿಸಿದ್ದಾರೆ.  ನಿರ್ಮಾಪಕರು  ಕ್ಲಿಪ್ ಅನ್ನು ತೋರಿಸಿದ್ದುಅದರಲ್ಲಿ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾದ "ಬಿಗ್ ಬಾಸ್" ಸೆಟ್ ನೈರ್ಮಲ್ಯೀಕರಣ ನಡೆಯುತ್ತಿದೆ. , ಜೊತೆಗೆ ಸಿಬ್ಬಂದಿ ಸದಸ್ಯರು ಹೌಸ್ ಮೇಡ್ ಗಳಿಗೆ  ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. 

"ಬಿಗ್ ಬಾಸ್ 2020 ಈ ಹಿಂದಿನ ಸರಣಿಗಳಿಗಿಂತ ಬೇರೆಯದೇ ಆಗಿರಲಿದೆ ಎಂದ ನಟ ಈ ಋತುವಿನ ಸ್ಪರ್ಧಿಗಳನ್ನು ಪರಿಚಯಿಸಿದ್ದು ಅವರು ಮನೆಗೆ ಪ್ರವೇಶಿಸುವ ಮೊದಲು ವೀಕ್ಷಕರನ್ನು ತಮ್ಮ ಶೋಗಳ ಮೂಲಕ ರಂಜಿಸಿದ್ದಾರೆ.

ನಿರ್ಮಾಣ ಸಂಸ್ಥೆಗೆ ಆಪ್ತವಾಗಿರುವ ಮೂಲಗಳ ಪ್ರಕಾರ ಸ್ಪರ್ಧಿಗಳು ಮನೆ ಪ್ರವೇಶಿಸುವ ಮೊದಲು ತಮ್ಮ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ್ದಾರೆ.

ಮಾಜಿ "ಬಿಗ್ ಬಾಸ್" ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ, ಹಿನಾ ಖಾನ್ ಮತ್ತು ಗೌಹರ್ ಖಾನ್ ಅವರು 'ತೂಫಾನಿ ಸೀನಿಯರ್ಸ್' ಆಗಿ ಕಾರ್ಯಕ್ರಮವನ್ನು ಪ್ರವೇಶಿಸಿದರು, ಅವರು ಮನೆಯ ನಿಯಂತ್ರಣವನ್ನು ವಹಿಸಿಕೊಳ್ಳುತ್ತಾರೆ ಮತ್ತು ಮೊದಲ 15 ದಿನಗಳವರೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ

 ಕಲರ್ಸ್ ಚಾನೆಲ್‌ನಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com