ಬಿಗ್ ಬಿ ಜನ್ಮದಿನಕ್ಕೆ 7,000 ಕ್ಕೂ ಹೆಚ್ಚು ಚಿತ್ರಗಳಿರುವ ಆಲ್ಬಮ್ ಗಿಫ್ಟ್ ನೀಡಿದ ಸೂಪರ್‌ಫ್ಯಾನ್!

ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಜನ್ಮದಿನಕ್ಕೆ ಚಿತ್ರೋದ್ಯಮ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅದರ ನಡುವೆ ಸೂರತ್‌ನ ಸೂಪರ್‌ಫ್ಯಾನ್‌ ಒಬ್ಬ  2 ದಶಕಗಳಿಂದ ಮೆಗಾಸ್ಟಾರ್‌ನ ವಿವಿಧ ಭಾವಚಿತ್ರಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಒಂದು ಆಲ್ಬಮ್ ಮಾಡಿ ಬಿಗ್ ಬಿಗೆ ಗಿಫ್ಟ್ ಆಗಿ ನೀಡಿದ್ದಾರೆ! 
ಬಿಗ್ ಬಿ ಜನ್ಮದಿನಕ್ಕೆ 7,000 ಕ್ಕೂ ಹೆಚ್ಚು ಚಿತ್ರಗಳಿರುವ ಆಲ್ಬಮ್ ಗಿಫ್ಟ್ ನೀಡಿದ ಸೂಪರ್‌ಫ್ಯಾನ್!

ಸೂರತ್: ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಜನ್ಮದಿನಕ್ಕೆ ಚಿತ್ರೋದ್ಯಮ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅದರ ನಡುವೆ ಸೂರತ್‌ನ ಸೂಪರ್‌ಫ್ಯಾನ್‌ ಒಬ್ಬ  2 ದಶಕಗಳಿಂದ ಮೆಗಾಸ್ಟಾರ್‌ನ ವಿವಿಧ ಭಾವಚಿತ್ರಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಒಂದು ಆಲ್ಬಮ್ ಮಾಡಿ ಬಿಗ್ ಬಿಗೆ ಗಿಫ್ಟ್ ಆಗಿ ನೀಡಿದ್ದಾರೆ! 

ಸೂರತ್ ಮೂಲದ ಬಚ್ಚನ್  ಅಭಿಮಾನಿ ದಿವ್ಯೇಶ್ ಕುಮಾರ್  1999 ರಿಂದ ಪ್ರಾರಂಭಿಸಿ ಇಂದಿನವರೆಗೆ ಸುಮಾರು 7,000 ಕ್ಕೂ ಹೆಚ್ಚುಭಾವಚಿತ್ರ್ಗಳ ಸಂಗ್ರಹ ಮಾಡಿದ್ದಾರೆ. ಇದರಲ್ಲಿ ಪಾಸ್ಪೋರ್ಟ್ ಅಳತೆಯ ಚಿತ್ರದಿಂದ ಹಿಡಿದು ಕ್ಯಾನ್ವಾಸ್ ವರೆಗಿನ ನಾನಾ ಅಳತೆಯ ನಾನಾ ರೂಪದ ಭಾವಚಿತ್ರಗಳಿದೆ. 

ನಾನು 1999 ರಲ್ಲಿ ಅಮಿತಾಬ್ ಅವರ  ಚಿತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಪಾಸ್‌ಪೋರ್ಟ್ ಗಾತ್ರದ ಚಿತ್ರಗಳಿಂದ ಹಿಡಿದು ಫಿಲ್ಮ್ ಪೋಸ್ಟರ್ ವರೆಗೆ  ನಾನು ಎಲ್ಲ ರೀತಿಯ ಚಿತ್ರಗಳನ್ನು ಸಂಗ್ರಹಿಸಿದೆ. ನಾನು ಅವರ ಹೊಸ ಚಿತ್ರವನ್ನು ಕಂಡಾಗಲೆಲ್ಲಾ ಅದನ್ನು ಕತ್ತರಿಸಿ ಸುರಕ್ಷಿತವಾಗಿ ಗಿ ಆಲ್ಬಮ್ ಆಗಿ ಇಡುತ್ತೇನೆ. ಇಲ್ಲಿಯವರೆಗೆ, ನಾನು 7,000 ಕ್ಕೂ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿದ್ದೇನೆ "ಎಂದು ದಿವ್ಯೇಶ್ ಎಎನ್‌ಐಗೆ ತಿಳಿಸಿದರು.

ಬಚ್ಚನ್ ಅವರ 78 ನೇ ಹುಟ್ಟುಹಬ್ಬದ ಸಂದರ್ಭದಲ್ಲಿದಿವ್ಯೇಶ್ ಕುಮಾರ್ ನಟನ ದೀರ್ಘ ಮತ್ತು ಸಂತೋಷದ ಜೀವನಕ್ಕಾಗಿ ಹಾರೈಸಿದ್ದು "ಅವರ '102 ನಾಟ್ ಔಟ್' ಚಿತ್ರದಂತೆಯೇ, ಅಮಿತಾಬ್ ಕೂಡ 102 ವರ್ಷ ಬದುಕುತ್ತಾರೆಎಂದು ನಾನು ಭಾವಿಸುತ್ತೇನೆ"  ಎಂದರು.

ದಿವ್ಯೇಶ್ ಇದುವರೆಗೆ ಬಿಗ್ ಬಿ ಅಮಿತಾಬ್ ಅವರನ್ನು ವಿವಿಧ ಸಂದರ್ಭಗಳಲ್ಲಿ  10  ಬಾರಿ ಭೇಟಿಯಾಗಿದ್ದಾರೆ.

"ನಾನು ಮೊದಲ ಬಾರಿಗೆ ಅಮಿತ್ ಜಿ ಅವರನ್ನು ಭೇಟಿಯಾದಾಗ, ಅಲ್ಲಿಯವರೆಗೆ ಅವರು ಮಾಡಿದ ಎಲ್ಲಾ ಚಲನಚಿತ್ರಗಳ ಹೆಸರನ್ನು ಹೊಂದಿರುವ ಚಿತ್ರವನ್ನು ನಾನು ಅವರಿಗೆ ನೀಡಿದ್ದೇನೆ. ಅವರ ಮೊಮ್ಮಗಳಿಗೆ ನಾನು ವಿಶೇಷ ಆಟಿಕೆ ಕೂಡ ನೀಡಿದ್ದೇನೆ. ಅದು ಹೇಗೆ ಮಾಡಲಾಗಿದೆ ಎಂದು  ಅವರು ನನ್ನನ್ನು ಕೇಳಿದಾಗ, ಸರ್, 'ಯೆ ತೋಹ್ ಟ್ರೈಲರ್ ಹೈ ಸರ್, ಪಿಕ್ಚರ್ ಅಭಿ ಬಾಕಿ ಹೈ (ಇದು ಕೇವಲ ಟ್ರೈಲರ್ ಸರ್, ಚಿತ್ರದ ಉಳಿದ ಭಾಗಗಳು ಇನ್ನೂ ಬರಬೇಕಿದೆ),' 'ಎಂದು ಕುಮಾರ್ ನಗುವಿನೊಂದಿಗೆ ಉತ್ತರಿಸಿದ್ದರು.

ಅಮಿತಾಬ್ ಬಚ್ಚನ್  ತಮ್ಮ ಮರಣದ ನಂತರ ತಮ್ಮ ಅಂಗಗಳನ್ನು ದಾನ ಮಾಡಲು ತೀರ್ಮಾನಿಸಿದ ಬೆನ್ನಲ್ಲೇ ದಿವ್ಯೇಶ್ ಕುಮಾರ್ ಹಾಗೂ ಅವರ ಕುಟುಂಬ ಸಹ ಅಂಗಾಂಗಗಳನ್ನು ದಾನ ಮಾಡಲು ಸಹಿ ಹಾಕಿದ್ದಾರೆ "ಅಮಿತಾಬ್  ಮರಣದ ನಂತರ ಅವರ ಅಂಗಗಳನ್ನು ದಾನ ಮಾಡಲು ಸೈನ್ ಅಪ್ ಮಾಡುವ ಮೂಲಕ ಬಹಳ ಉದಾತ್ತ ಕೆಲಸ ಮಾಡಿದ್ದಾರೆ. ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ನನ್ನ ಕುಟುಂಬದೊಂದಿಗೆ ನಾನು ಕೂಡ ಅದೇ ರೀತಿ ತೀರ್ಮಾನ ಮಾಡಿದ್ದೇನೆ." ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com