'ಕ್ಲೈಮೇಟ್ ವಾರಿಯರ್' ಎಫೆಕ್ಟ್: ಸಸ್ಯಹಾರಿಯಾಗಿ ಬದಲಾದ ಬಾಲಿವುಡ್ ನಟಿ ಭೂಮಿ ಪಡ್ನೇಕರ್!

ಹವಾಮಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ 'ಹವಾಮಾನ ವಾರಿಯರ್' ನಿಂದಾಗಿ ಬಾಲಿವುಡ್ ನಟ ಭೂಮಿ ಪಡ್ನೇಕರ್ ಸಸ್ಯಾಹಾರಿಯಾಗಿ ಬದಲಾಗಿದ್ದಾರಂತೆ.
ಭೂಮಿ ಪಡ್ನೇಕರ್
ಭೂಮಿ ಪಡ್ನೇಕರ್

ಮುಂಬೈ: ಹವಾಮಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ 'ಹವಾಮಾನ ವಾರಿಯರ್' ನಿಂದಾಗಿ ಬಾಲಿವುಡ್ ನಟ ಭೂಮಿ ಪಡ್ನೇಕರ್ ಸಸ್ಯಾಹಾರಿಯಾಗಿ ಬದಲಾಗಿದ್ದಾರಂತೆ.

'ಬಾಲಾ' ಚಿತ್ರದ ನಟಿ ಸಸ್ಯಾಹಾರಿಯಾಗಿ ಮಾರ್ಪಟ್ಟಿದ್ದಾರೆ. ಈ ಪದ್ಧತಿಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ತನ್ನ ಹವಾಮಾನ ಪ್ರಜ್ಞೆಯ ಪ್ರಯಾಣಕ್ಕೆ ಸಲ್ಲುತ್ತದೆ ಎಂದರು. 

ಹಲವು ವರ್ಷಗಳಿಂದ ನಾನು ಸಸ್ಯಾಹಾರಿಯಾಗಬೇಕೆಂಬ ಹಂಬಲ ಹೊಂದಿದ್ದೆ ಆದರೆ ಅದನ್ನು ಮುರಿಯುವುದು ಅಷ್ಟು ಸುಲಭವಾಗರಿಲಿಲ್ಲ. ಹವಾಮಾನ ವಾರಿಯರ್‌ನೊಂದಿಗಿನ ನನ್ನ ಪ್ರಯಾಣವು ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿದೆ ಮತ್ತು ನಾನು ಇನ್ನು ಮುಂದೆ ಮಾಂಸ ಸೇವಿಸುವ ಗೋಜಿಗೆ ಹೋಗುವುದಿಲ್ಲ ಎಂದು ಅವರು ಹೇಳಿದರು.

ಈ ವರ್ಷದ ಡಿಸೆಂಬರ್ 11ರಂದು ತಮ್ಮು ಮುಂದಿನ ಚಿತ್ರ 'ದುರ್ಗಾವತಿ' ಬಿಡುಗಡೆ ಮಾಡಲು ಭೂಮಿ ಸಜ್ಜಾಗಿದ್ದಾರೆ. ಲಾಕ್ ಡೌನ್ ಸಮಯ ತಮ್ಮನ್ನು ಸಸ್ಯಾಹಾರಕ್ಕೆ ಸೇವಿಸುವಂತೆ ಮಾಡಿದೆ ಎಂಬುದು ತಮಗೆ ಅರಿವಾಗಿರುವುದಾಗಿ ಹೇಳಿದರು.

"ನಾನು ಅತಿಯಾಗಿ ಮಾಂಸಹಾರವನ್ನು ಸೇವಿಸುವುದಿಲ್ಲ, ಆದರೂ ನಾನು ಲಾಕ್‌ಡೌನ್‌ ಸಮಯದಲ್ಲಿ ಮಾಂಸಹಾರ ತ್ಯಜಿಸುವ ಯೋಚನೆ ಮಾಡಿದೆ. ಅದು ಸಹಜವಾಗಿ ಸಂಭವಿಸಿದ ಸಂಗತಿಯಾಗಿದೆ. 6 ತಿಂಗಳಿನಿಂದ ಮಾಂಸಾಹಾರ ಸೇವಿಸಿಲ್ಲ. ಇದೀಗ ನಾನು ತಪ್ಪಿತಸ್ಥ ಮನೋಭಾವದಿಂದ ಹೊರಬಂದಿದ್ದು ಜೊತೆಗೆ ದೈಹಿಕವಾಗಿ ಬಲಶಾಲಿಯಾಗಿದ್ದೇನೆ ಎಂದು 31ರ ಹರೆಯದ ನಟಿ ಹೇಳಿದ್ದಾರೆ. 

ಜಾಗೃತಿ ಮೂಡಿಸಲು ಹವಾಮಾನ ಸಂರಕ್ಷಣೆಯನ್ನು ಕೈಗೆತ್ತಿಕೊಂಡ ಭೂಮಿ 'ಕ್ಲೈಮೇಟ್ ವಾರಿಯರ್' ಎಂಬ ಶ್ಲಾಘನೀಯ ಆನ್‌ಲೈನ್ ಮತ್ತು ಆಫ್‌ಲೈನ್ ಉಪಕ್ರಮವನ್ನು ಪ್ರಾರಂಭಿಸಿದ್ದು, ಈ ಮೂಲಕ ಅವರು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲು ಭಾರತದ ನಾಗರಿಕರನ್ನು ಸಜ್ಜುಗೊಳಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com