ನಾನು ಶೀಘ್ರವೇ ಕ್ಯಾನ್ಸರ್ ರೋಗವನ್ನು ಸೋಲಿಸುತ್ತೇನೆ: ಬಾಲಿವುಡ್ ನಟ ಸಂಜಯ್ ದತ್

ಕ್ಯಾನ್ಸರ್ ವಿರುದ್ಧದ ಹೋರಾಟದ ಬಗೆಗೆ ಬಾಲಿವುಡ್ ನಟ ಸಂಜಯ್ ದತ್ ಇದೇ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ದತ್ ಅವರು ಶೀಘ್ರದಲ್ಲೇ ಈ  ಮಹಾಮಾರಿ ಕಾಯಿಲೆಯನ್ನು "ಸೋಲಿಸುತ್ತೇನೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

Published: 15th October 2020 11:56 AM  |   Last Updated: 15th October 2020 02:26 PM   |  A+A-


Sanjay Dutt

ಸಂಜಯ್ ದತ್, ಆಲಿಮ್ ಹಕೀಮ್

Posted By : Raghavendra Adiga
Source : PTI

ಕ್ಯಾನ್ಸರ್ ವಿರುದ್ಧದ ಹೋರಾಟದ ಬಗೆಗೆ ಬಾಲಿವುಡ್ ನಟ ಸಂಜಯ್ ದತ್ ಇದೇ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಈ  ಮಹಾಮಾರಿ ಕಾಯಿಲೆಯನ್ನು "ಸೋಲಿಸುತ್ತೇನೆ" ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ ನಲ್ಲಿ  61 ವರ್ಷದ ನಟ ಸಂಜಯ್ ದತ್ ತಮ್ಮ ವೈಕ್ದ್ಯಕೀಯ ಚಿಕಿತ್ಸೆಯ ಕಾರಣಕ್ಕಾಗಿ ವೃತ್ತಿಜೀವನದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು, ಅವರು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ವರದಿಗಳ ನಡುವೆ ಈ ಪ್ರಕಟಣೆ ಹೊರಬಿದ್ದಿತ್ತು.

ಬುಧವಾರ ಸಂಜೆ ಸಂಜಯ್ ದತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನ ವೀಡಿಯೊದಲ್ಲಿ ಪ್ರಸಿದ್ಧ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರ ಸಲೂನ್ ನಲ್ಲಿ  ಕ್ಷೌರ ಮಾಡಿಸಿಕೊಳ್ಳುತ್ತಿದ್ದ ದೃಶ್ಯಗಳಿದೆ. ಕ್ಷೌರದ ಭಾಗವಾಗಿ ಹಕೀಮ್ ಗಾಯ ಮಾಡಿದ್ದರ ಬಗ್ಗೆ ನಟ ಗಮನಸೆಳೆದರು ಮತ್ತು "ಇದು ನನ್ನ ಜೀವನದಲ್ಲಿನ ಇತ್ತೀಚಿನ ಗಾಯವಾಗಿದೆ. ಆದರೆ ನಾನು ಅದನ್ನು ಮಣಿಸುತ್ತೇನೆನಾನು ಶೀಘ್ರದಲ್ಲೇ ಈ ಕ್ಯಾನ್ಸರ್ ನಿಂದ ಹೊರಬರುತ್ತೇನೆ" ಎಂದು ಹೇಳಿದರು. ಸಂಜಯ್ ದತ್ಪತ್ನಿ, ನಿರ್ಮಾಪಕಿ ಮಾನ್ಯತಾ ದತ್ ಅವರೊಂದಿಗೆ ಕಳೆದ ತಿಂಗಳು ತಮ್ಮ ಮಕ್ಕಳೊಂದಿಗೆ ಇರಲು ದುಬೈಗೆ ತೆರೆಳಿದ್ದರು. 

ಇತ್ತೀಚೆಗೆ ಸಡಕ್  2 ನಲ್ಲಿ ಕಾಣಿಸಿಕೊಂಡ ಈ ನಟ ಕನ್ನಡದ ಬಹುನಿರೀಕ್ಷಿತ ಚಿತ್ರ "ಕೆಜಿಎಫ್ ಚಾಪ್ಟರ್ 2" ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ರಣಬೀರ್ ಕಪೂರ್ ಅಭಿನಯದ "ಶಂಶೇರ್" ನಲ್ಲಿಯೂ ಅಭಿನಯಿಸಿದ್ದಾರೆ. ಮುಂದಿನ ತಿಂಗಳು ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿರುವ ಕಾರಣ 2018 ರ ಆಕ್ಷನ್ ಡ್ರಾಮಾ ಕೆಜಿಎಫ್‌ನ ಉತ್ತರಭಾಗಕ್ಕಾಗಿ ಗಡ್ಡವನ್ನು ಬೆಳೆಸುತ್ತಿದ್ದೇನೆ ಎಂದು ಸಂಜಯ್ ದತ್ ಹೇಳಿದ್ದಾರೆ. ಯಶ್ ಅಭಿನಯದ ಪಿರಿಯಡ್ ಆಕ್ಷನ್ ಚಿತ್ರ ಬಾಲಿವುಡ್ ನಟನ ಚೊಚ್ಚಲ ಕನ್ನಡ ಚಿತ್ರವಾಗಿದೆ.

"ನವೆಂಬರ್‌ನಲ್ಲಿ ಶೂಟಿಂಗ್ ಪ್ರಾರಂಬವಾಗುತ್ತಿದ್ದಂತೆ ನಾನು ಸೆಟ್ಟಿನಲ್ಲಿರಬೇಕು. ಸೆಟ್‌ಗಳಲ್ಲಿ ಇರುವುದು ನನಗೆ ಸಂತೋಷ ತರುತ್ತದೆ. ಶಂಶೇರ್ ಡಬ್ಬಿಂಗ್ ಕೂಡ ನಡೆಯಬೇಕಿದೆ. ಹಾಗಾಗಿ ನಾನು ಶೀಘ್ರ ಹಿಂತಿರುಗಬೇಕು." ಎಂದು ಅವರು ಹೇಳಿದರು. ವೀಡಿಯೊದ ಕೊನೆಯಲ್ಲಿ, ನಟ ಉತ್ತಮ ಉತ್ಸಾಹದ ಚಿಲುಮೆಯಾಗಿರುವುದು ಸಂತಸ ಮೂಡಿಸಿದೆ ಎಂದು  ಹಕೀಮ್ ಹೇಳಿದಾಗ, ಚಿಕಿತ್ಸೆಯ ಕಾರಣದಿಂದಾಗಿ ತೂಕ ಇಳಿಕೆಯಾದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿರುವುದಾಗಿ ನಟ ಹೇಳೀದ್ದಾರೆ.

Stay up to date on all the latest ಬಾಲಿವುಡ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp