ದಬ್ಬಾಳಿಕೆ, ಅತ್ಯಾಚಾರ ಆರೋಪ: ನಟ ಮಿಥುನ್ ಚಕ್ರವರ್ತಿ ಪತ್ನಿ, ಪುತ್ರನ ವಿರುದ್ಧ ಪ್ರಕರಣ ದಾಖಲು

ಯುವತಿಯ ಮೇಲೆ ಅತ್ಯಾಚಾರ ಮತ್ತು ಬಲಾತ್ಕಾರ ನಡೆಸಿದ ಆರೋಪಕ್ಕೆ ಸಂಬಂಧಿಸಿ ಹಿರಿಯ ನಟ ಮಿಥುನ್ ಚಕ್ರವರ್ತಿಯವರ ಪುತ್ರ ಮಹಾಕ್ಷಯ್ ಮತ್ತು ಅವರ ಪತ್ನಿ ಯೋಗಿತಾ ಬಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.

Published: 17th October 2020 01:03 PM  |   Last Updated: 17th October 2020 01:18 PM   |  A+A-


Mithun_Chakraborty1

ಮಿಥುನ್ ಚಕ್ರವರ್ತಿ, ಪುತ್ರ ಮಹಾಕ್ಷಯ್ , ಸೊಸೆ ಬಾಲಿ

Posted By : Nagaraja AB
Source : UNI

ಮುಂಬೈ: ಯುವತಿಯ ಮೇಲೆ ಅತ್ಯಾಚಾರ ಮತ್ತು ಬಲಾತ್ಕಾರ ನಡೆಸಿದ ಆರೋಪಕ್ಕೆ ಸಂಬಂಧಿಸಿ ಹಿರಿಯ ನಟ ಮಿಥುನ್ ಚಕ್ರವರ್ತಿಯವರ ಪುತ್ರ ಮಹಾಕ್ಷಯ್ ಮತ್ತು ಅವರ ಪತ್ನಿ ಯೋಗಿತಾ ಬಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.

ತಾನು ಮಹಾಕ್ಷಯ್ ಅವರೊಂದಿಗೆ 2015 ರಿಂದ ಸಂಬಂಧ ಹೊಂದಿದ್ದು, ಅವರ ತಾಯಿಯೂ ಸಹ ವಿವಾಹ ನಡೆಸುವ ಭರವಸೆ ನೀಡಿದ್ದಾರೆ.  2015 ರಲ್ಲಿ ಮಹಾಕ್ಷಯ್ ತನ್ನನ್ನು ಮನೆಗೆ ಕರೆದು ತಂಪು ಪಾನೀಯದಲ್ಲಿ ಮಾದಕ ಬೆರೆಸಿ ಸೇವಿಸಲು ನೀಡಿದ್ದರು ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 

ಕಳೆದ ನಾಲ್ಕು ವರ್ಷಗಳಲ್ಲಿ, ಮಹಾಕ್ಷಯ್ ದೈಹಿಕ ಸಂಬಂಧವನ್ನು ಮುಂದುವರೆಸಿ ಗರ್ಭಿಣಿಯಾಗಿದ್ದಾಗ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಒಪ್ಪದಿದ್ದಾಗ ಕೆಲವು ಮಾತ್ರೆಗಳನ್ನು ಕೊಟ್ಟು ಗರ್ಭಪಾತವಾಗುವಂತೆ ಮಾಡಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸಂತ್ರಸ್ತೆಗೆ ನಟ ಮಿಥುನ್ ಚಕ್ರವರ್ತಿ ಅವರ ಪತ್ನಿ ಬೆದರಿಕೆ ಹಾಕಿದ್ದು, ಪ್ರಕರಣವನ್ನು ವಜಾಗೊಳಿಸುವಂತೆ ಎಚ್ಚರಿಸಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Stay up to date on all the latest ಬಾಲಿವುಡ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp