’ಡಿಡಿಎಲ್‌ಜೆ’ಗೆ 25ರ ಸಂಭ್ರಮ: ಲಂಡನ್‌ನ 'ಸೀನ್ಸ್ ಇನ್ ದಿ ಸ್ಕ್ವೇರ್'ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣಕ್ಕೆ ಸಜ್ಜು!

"ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ (ಡಿಡಿಎಲ್‌ಜೆ)" ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆ ಲಂಡನ್ನಿನ  ಲೀಸೆಸ್ಟರ್ ಸ್ಕ್ವೇರ್ ನ  'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ಸೋಮವಾರ ಪ್ರಕಟಿಸಿದೆ
ಶಾರುಖ್ ಖಾನ್, ಕಾಜೋಲ್
ಶಾರುಖ್ ಖಾನ್, ಕಾಜೋಲ್

"ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ (ಡಿಡಿಎಲ್‌ಜೆ)" ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆ ಲಂಡನ್ನಿನ  ಲೀಸೆಸ್ಟರ್ ಸ್ಕ್ವೇರ್ ನ  'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ಸೋಮವಾರ ಪ್ರಕಟಿಸಿದೆ.

2021 ರ ವಸಂತಋತುವಿನಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲು ಸಜ್ಜಾಗಿದ್ದು, ಚಿತ್ರದಲ್ಲಿ ರಾಜ್ ಮತ್ತು ಸಿಮ್ರಾನ್ ಪಾತ್ರದಲ್ಲಿ ನಟಿಸಿರುವ ಖಾನ್ ಮತ್ತು ಕಾಜೋಲ್ ವಿಶೇಷ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲು ಆಗಮಿಸುವ ಸಾಧ್ಯತೆ ಇದೆ ಎಂದು ಸಂಘಟಕರು ಆಶಿಸಿದ್ದಾರೆ.

"ಶಾರುಖ್ ಖಾನ್ ಮತ್ತು ಕಾಜೋಲ್ ಅವರಂತಹ ಅಂತರರಾಷ್ಟ್ರೀಯ ಸಿನೆಮಾದ ಐಕಾನ್ ‌ಗಳನ್ನು ನಮ್ಮಲ್ಲಿಗೆ ಸೇರ್ಪಡಿಸುತ್ತಿರುವುದು ಅದ್ಭುತವಾಗಿದೆ. "ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ" ಸಾರ್ವಕಾಲಿಕ ಅತ್ಯಂತ ಯಶಸ್ವಿ ಮತ್ತು ಪ್ರಮುಖ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿದೆ,  ಅಲ್ಲದೆ ಲೀಸೆಸ್ಟರ್ ಸ್ಕ್ವೇರ್ ನಲ್ಲಿಅವಕಾಶ ಪಡೆದ  ಮೊದಲ ಚಿತ್ರ. ಈ ಪ್ರತಿಮೆಯು ಬಾಲಿವುಡ್ ಗೆ ಜಾಗತಿಕ ಜನಪ್ರಿಯತೆ ಮತ್ತು ಸಿನೆಮಾ ನಿರ್ಮಾಣಕ್ಕೆ ಸಹಾಯ ಮಾಡುವ ಸಾಂಸ್ಕೃತಿಕ ಬಂಧನಕ್ಕೆ  ಸೂಕ್ತವಾದ ಗೌರವವಾಗಿದೆ, ಮತ್ತು ಇದು ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಆಕರ್ಷಿಸುತ್ತದೆ ಎಂಬುದರಲ್ಲಿ ನಮಗೆ ಸಂದೇಹವಿಲ್ಲ , "ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ನಲ್ಲಿ ಡೆಸ್ಟಿನೇಶನ್ ಮಾರ್ಕೆಟಿಂಗ್ ನಿರ್ದೇಶಕರಾಗಿರುವ ಮಾರ್ಕ್ ವಿಲಿಯಮ್ಸ್ ಹೇಳಿದರು.

ಯುನೈಟೆಡ್ ಕಿಂಗ್‌ಡಂನಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಬಾಲಿವುಡ್ ಜೋಡಿಯ ಪ್ರತಿಮೆ ಇದಾಗಿದೆ. ಈ ಘೋಷಣೆಯು ಭಾರತೀಯ ಚಿತ್ರರಂಗದ ಅತ್ಯಂತಪ್ರೀತಿಯ ಚಿತ್ರ ಡಿಡಿಎಲ್‌ಜೆಯ 25 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ.ಮಾತ್ರವಲ್ಲದೆ ಯಶ್ ರಾಜ್ ಫಿಲ್ಮ್ಸ್ ನ 50 ನೇ ವರ್ಷದ ದೊಡ್ಡ ಸಂಭ್ರಮಾಚರಣೆಗೂ ಮತ್ತೊಂದು ಸೇರ್ಪಡೆಯಾಗಿರಲಿದೆ.

"ದಿಲ್ವಾಲೆ.. 25 ವರ್ಷಗಳ ಹಿಂದೆ ಬಿಡುಗಡೆಯಾದಾಗ, ಅದು ಉದ್ಯಮದ ದಿಕ್ಕನ್ನೇ ಬದಲಿಸಿತು,ಅದನ್ನು ನೋಡಿದ ಪ್ರತಿಯೊಬ್ಬರ ಹೃದಯವನ್ನೂ ಸೆರೆಹಿಡಿಯಿತು. ಈ ಪ್ರತಿಮೆಯನ್ನು ಸ್ಥಾಪನೆ ಮಾಡುವ ಘೋಷಣೆಯನ್ನು ಕೇಳುವುದೇ ಖುಷಿ. 'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಪ್ರತಿನಿಧಿಸಲ್ಪಟ್ಟ ಭಾರತೀಯ ಮೂಲದ ಮೊದಲ ಚಿತ್ರ ಇದಾಗಿರಲಿದೆ.  ಈ ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನು ಹಾಲಿವುಡ್ ಗಣ್ಯರೊಂದಿಗೆ ಗುರುತಿಸಲಾಗುತ್ತಿದೆ.  ಜೀನ್ ಕೆಲ್ಲಿಯಿಂದ ಲಾರೆಲ್ ಮತ್ತು ಹಾರ್ಡಿ, ಮತ್ತು ಸಿನೆಮಾದ ಅಂತರರಾಷ್ಟ್ರೀಯ ಅಟ್ರಾಕ್ಷನ್ ಗಳನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ. " ಯಶ್ ರಾಜ್ ಫಿಲ್ಮ್ಸ್ ನ ವಿಶೇಷ ಯೋಜನೆಗಳ ಉಪಾಧ್ಯಕ್ಷ ಅವತಾರ್ ಪನೇಸರ್ ಹೇಳಿದ್ದಾರೆ.

ರಾಜ್ ಮತ್ತು ಸಿಮ್ರಾನ್ ಅವರ ಪ್ರೇಮಕಥೆಯು ಕಿಂಗ್ಸ್ ಕ್ರಾಸ್ ಸ್ಟೇಷನ್ ನಲ್ಲಿ ಪ್ರಾರಂಬವಾಗಿ ಯುರೋಪ್ ಮತ್ತು ಭಾರತದಾದ್ಯಂತ ಮುಂದುವರಿದಿತ್ತು. ಆದಿತ್ಯ ಚೋಪ್ರಾ ನೇತೃತ್ವದಲ್ಲಿ ಚೊಚ್ಚಲ ಚಿತ್ರವಾಗಿ ಮೂಡಿ ಬಂದಿದ್ದ "ಡಿಡಿಎಲ್‌ಜೆ" ಅದುವರೆಗಿನ ಎಲ್ಲಾ ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ನುಚ್ಚುನೂರಾಗಿಸಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿದೊಡ್ಡ ಸಾರ್ವಕಾಲಿಕ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಯಿತು. ಇದು ಸಾರ್ವಕಾಲಿಕ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೆ  10 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com