ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದ ನಟಿ ಪಾಯಲ್ ಘೋಷ್ ಆರ್ ಪಿಐಗೆ ಸೇರ್ಪಡೆ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ರೇಪ್ ಕೇಸು ದಾಖಲಿಸಿದ್ದ ನಟಿ ಪಾಯಲ್ ಘೋಷ್ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಸೇರಿಕೊಂಡಿದ್ದಾರೆ.
ಪಾಯಲ್ ಘೋಷ್
ಪಾಯಲ್ ಘೋಷ್

ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ರೇಪ್ ಕೇಸು ದಾಖಲಿಸಿದ್ದ ನಟಿ ಪಾಯಲ್ ಘೋಷ್ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಸೇರಿಕೊಂಡಿದ್ದಾರೆ.

ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ಅವರ ಸಮ್ಮುಖದಲ್ಲಿ ಇಂದು ಪಾಯಲ್ ಘೋಷ್  ಆರ್ ಪಿಐ ಪಕ್ಷಕ್ಕೆ ಸೇರ್ಪಡೆಯಾದರು. ಆಕೆಗೆ  ಬಾವುಟ ನೀಡುವ ಮೂಲಕ ಅಠಾವಳೆ ಪಕ್ಷಕ್ಕೆ ಬರಮಾಡಿಕೊಂಡರು. ಆರ್‌ಪಿಐ (ಎ) ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ತಿಂಗಳು ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಪಾಯಲ್ ಘೋಷ್ ನಂತರ ಮಹಾರಾಷ್ಟ್ರ ರಾಜ್ಯಪಾಲ ಬಿ ಎಸ್ ಕೋಶ್ಯಾರಿ ಅವರನ್ನು ಭೇಟಿಯಾಗಿ ಕಶ್ಯಪ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. 

ಪಾಯಲ್ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಕಶ್ಯಪ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ವರ್ಸೋವಾದ ಯಾರಿ ರಸ್ತೆ ಸಮೀಪದ ಸ್ಥಳದಲ್ಲಿ ಕಶ್ಯಪ್ ತನ್ನ ಮೇಲೆ 2013ರಲ್ಲಿ ಅತ್ಯಾಚಾರ ನಡೆಸಿದ್ದರು ಎಂದು ಪಾಯಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com