ಲುವಿಯೆನಾ ಲೋಧ್ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನಿರ್ದೇಶಕ ಮಹೇಶ್ ಭಟ್

ತಮ್ಮ ಮೇಲೆ ಸುಳ್ಳು ಆರೋಪ, ಅಪ ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ನಟಿ ಲುವಿಯೆನಾ ಲೋಧ್ ವಿರುದ್ಧ ಚಿತ್ರ ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಸಹೋದರ್ ಮುಕೇಶ್ ಭಟ್ ಸೋಮವಾರ ಬಾಂಬೆ ಹೈಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

Published: 26th October 2020 05:17 PM  |   Last Updated: 26th October 2020 06:03 PM   |  A+A-


Mahesh_butt1

ಮಹೇಶ್ ಭಟ್, ಲುವಿಯೆನಾ ಲೋಧ್

Posted By : Nagaraja AB
Source : PTI

ಮುಂಬೈ:  ತಮ್ಮ ಮೇಲೆ ಸುಳ್ಳು ಆರೋಪ, ಅಪ ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ನಟಿ ಲುವಿಯೆನಾ ಲೋಧ್ ವಿರುದ್ಧ ಚಿತ್ರ ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಸಹೋದರ್ ಮುಕೇಶ್ ಭಟ್ ಸೋಮವಾರ ಬಾಂಬೆ ಹೈಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಲೋಧ್ ನಿಂದ ಮಾನಹಾನಿಗಾಗಿ 1 ಕೋಟಿ ರೂ. ಬಯಸಿರುವ ಭಟ್,  ಆಕೆ ಮುಂದೆ ಇಂತಹ ಸುಳ್ಳು ಆರೋಪ ಮಾಡದಂತೆ ಆದೇಶಿಸಬೇಕೆಂದು ಕೋರಿದ್ದಾರೆ.

ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಕೆ ಮೆನೆನ್ ಅವರನ್ನೊಳಗೊಂಡ ಏಕ ಸದಸ್ಯ ಪೀಠ, ಪ್ರತಿಕ್ರಿಯೆ ನೀಡುವಂತೆ ಲೋಧ್ ಗೆ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

 ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೊಂದನ್ನು ಫೋಸ್ಟ್ ಮಾಡಿದ್ದ ಲೋಧ್, ಮಹೇಶ್ ಭಟ್ ಸೋದರಳಿಯ ಎನ್ನಲಾಗುವ ಸುಮಿತ್ ಸಬರ್ ವಾಲ್ , ಡ್ರಗ್ಸ್ ಪೂರೈಕೆ ಮತ್ತು ಸಾಗಾಟದ ವ್ಯವಹಾರ ಮಾಡುತ್ತಿದ್ದಾರೆ. ಮಹೇಶ್ ಭಟ್ ಈ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Stay up to date on all the latest ಬಾಲಿವುಡ್ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp