ದಿ ಎಂಡ್' ವೆಬ್‌ ಸರಣಿಗಾಗಿ ಅಕ್ಷಯ್ ಸಂಭಾವನೆ 90 ಕೋಟಿ ರೂಪಾಯಿ!

ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 'ದಿ ಎಂಡ್' ವೆಬ್‌ಸೈರಿಸ್ ಗಾಗಿ 90 ಕೋಟಿ ಸಂಭಾವನೆ ಪಡೆಯಬಹುದು.

Published: 07th September 2020 10:28 PM  |   Last Updated: 07th September 2020 10:28 PM   |  A+A-


akshay kumar

ಅಕ್ಷಯ್ ಕುಮಾರ್

Posted By : Srinivas Rao BV
Source : Online Desk

ಮುಂಬೈ: ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 'ದಿ ಎಂಡ್' ವೆಬ್‌ ಸಿರಿಸ್ ಗಾಗಿ 90 ಕೋಟಿ ಸಂಭಾವನೆ ಪಡೆಯಬಹುದು.

ಅಕ್ಷಯ್ ಕುಮಾರ್ ಕಳೆದ ವರ್ಷ 'ದಿ ಎಂಡ್' ಚಿತ್ರದ ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಪ್ರವೇಶ ಮಾಡುವುದಾಗಿ ಘೋಷಿಸಿದ್ದರು. ಆಕ್ಷನ್ ಥ್ರಿಲ್ಲರ್ ದಿ ಎಂಡ್ ಚಿತ್ರ 2020 ರಲ್ಲಿ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಆಗಿದ್ದರಿಂದ ಇದು ಸಾಧ್ಯವಾಗಲಿಲ್ಲ. 

ಸ್ಟಂಟ್ ಆಧಾರಿತ ಸರಣಿ ಇದಾಗಿರಲಿದೆ. ಅಕ್ಷಯ್ ಅವರ ಅಪಾಯಕಾರಿ ಸಾಹಸಗಳನ್ನು ಈ ಸರಣಿಯಲ್ಲಿ ಕಾಣಬಹುದು.  ಈ ವೆಬ್ ಸೀರೀಸ್ ನ್ನು ಅಕ್ಷಯ್ ಕುಮಾರ್ ಒಪ್ಪಿಕೊಳ್ಳುವುದಕ್ಕೆ  ಅವರ ಪುತ್ರ ಆರವ್ ಕಾರಣವಂತೆ, ವೆಬ್ ಸೀರೀಸ್ ನಲ್ಲಿ ನಟಿಸುವಂತೆ ಪುತ್ರನೇ ಅಕ್ಷಯ್ ಕುಮಾರ್ ಗೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. 

Stay up to date on all the latest ಬಾಲಿವುಡ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp